ಮೈಸೂರು

ಶಿಕ್ಷಕರಿಂದಲೇ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ: ಹಂ.ಲಕ್ಕೇಗೌಡ

ಶಿಕ್ಷಕರಿಂದಲೇ ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ. ಸರ್ಕಾರಿ ಶಾಲಾ ಶಿಕ್ಷಕರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಅಧಿಕಾರಿಗಳು ಖಾಸಗಿ ಶಾಲೆಗಳ ಹಣದಾಸೆಗೆ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಕರ್ನಾಟಕ ಸಾಮಾಜಿಕ ನ್ಯಾಯ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಹಂ.ಲಕ್ಕೇಗೌಡ ದೂರಿದರು.

ಅವರು, ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕುಸಿದು ರೈತರು ಕಂಗಾಲಾಗಿ ಆತ್ಮಹತ್ಯೆಗೆ ಮೊರೆ ಹೋಗಿದ್ದಾರೆ. ಅಸಮರ್ಪಕ ಕುಡಿಯುವ ನೀರು, ಬಡತನ ಸಮಸ್ಯೆಗಳು ಬೃಹದಾಕಾರವಾಗಿವೆ. ಈ ಸಮಸ್ಯೆಗಳನ್ನೆಲ್ಲ ಬದಿಗಿರಿಸಿದ ಜನಪ್ರತಿನಿಧಿಗಳು, ಐಎಎಸ್ ಅಧಿಕಾರಿ ಡಿ.ಕೆ.ರವಿ ಹಾಗೂ ಡಿ.ವೈ.ಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಗಳನ್ನು, ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರವೀಕ್ಷಣೆ ಹಾಗೂ ಇತ್ತೀಚೆಗೆ ವಿಧಾನಸೌಧ ಪ್ರವೇಶಿಸಿ 1,90,00,000/- ಲಕ್ಷ ರೂಪಾಯಿ ಪ್ರಕರಣಗಳಿಂದಲೇ ವಿಧಾನಸಭಾ ಕಲಾಪದಲ್ಲಿ ಕಾಲಹರಣ ಮಾಡುತ್ತಿರುವುದು ಖಂಡನೀಯವೆಂದರು.

ಶಿಕ್ಷಣ ಸಚಿವ ತನ್ವೀರ್ ಸೇಠ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆಯಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. 2009ರಲ್ಲಿ ಬಿ.ಎಡ್. ಪದವೀಧರರನ್ನು ಬಿಟ್ಟು 1320 ಜನ ಸ್ನಾತಕೋತ್ತರ ಪದವಿ ಪಡೆದವರನ್ನು ನೇಮಿಸಿಕೊಂಡು ಅವರಿಗೆ ಸರ್ಕಾರದ ಹಣದಲ್ಲಿಯೇ ಬಿ.ಎಡ್. ಮಾಡಿಸಿದೆ.  ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹಾಗೂ ಸಾರ್ವಜನಿಕರ ಹಣವು ದುರುಪಯೋಗವಾಗಿದೆ. ಬಿ.ಎಡ್.ಪದವೀಧರರಿಗೆ ಅನ್ಯಾಯವಾಗಿದೆ. ಸರ್ಕಾರದ ಹಣದಲ್ಲಿ ಬಿ.ಎಡ್ ಮಾಡಿದ ಉದ್ಯೋಗಿಗಳಿಂದ ಒಂದು ವರ್ಷದ ಸಂಬಳವನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಕೆ.ನಿಂಗೇಗೌಡ, ಚಂದ್ರಶೇಖರಯ್ಯ, ವೇದಿಕೆಯ ಕಾರ್ಯದರ್ಶಿ ಟಿ.ಹೆಚ್.ಗೋವಿಂದೇಗೌಡ ಹಾಗೂ ಸಿ.ಪಿ.ದೊಡ್ಡೇಗೌಡ ಉಪಸ್ಥಿತರಿದ್ದರು.

Leave a Reply

comments

Related Articles

error: