ಮೈಸೂರು

ಜೆಎಸ್ಎಸ್ ವಿಶ್ವವಿದ್ಯಾನಿಲಯದಲ್ಲಿ 7 ದಿನಗಳ ಎನ್ಎಸ್ಎಸ್ ಶಿಬಿರ ಆಯೋಜನೆ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಸಮಾಜದ ಅಭಿವೃದ್ಧಿಗೆ ಸಹಕಾರ ಹಾಗೂ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಜೆ.ಎಸ್.ಎಸ್. ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಎನ್.ಎಸ್.ಎಸ್. ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕುಲಸಚಿವ ಡಾ.ಬಿ.ಮಂಜುನಾಥ ತಿಳಿಸಿದರು.

ಅವರು ಪತ್ರಕರ್ತರ ಭವನದಲ್ಲಿ ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಯ ಎನ್.ಎಸ್.ಎಸ್.ಘಟಕದ ಸಂಯುಕ್ತಾಶ್ರಯದಲ್ಲಿ ಡಿ.1 ರಿಂದ 7ರವರೆಗೆ ಶ್ರೀ ಶಿವರಾತ್ರೀಶ್ವರ ನಗರದ ಜೆ.ಎಸ್.ಎಸ್. ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಬಿರವು ಜರುಗಲಿದೆ. ಡಿ.1ರಂದು ಜಿಲ್ಲಾಧಿಕಾರಿ ರಂದೀಪ್ ಶಿಬಿರಕ್ಕೆ ಚಾಲನೆ ನೀಡುವರು. ಉಪಕುಲಪತಿ ಡಾ.ಬಿ.ಸುರೇಶ್ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆ ನಿರ್ದೇಶಕ ಪ್ರಾದೇಶಿಕ ನಿರ್ದೇಶಕ ಎ.ಎನ್.ಪೂಜಾರ್  ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಪರ್ಕಾಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರ್ ಪಾಲ್ಗೊಳ್ಳುವರು. ಕೇರಳ, ಆಂದ್ರ-ತೆಲಂಗಾಣ, ಓಡಿಶಾ ಹಾಗೂ ರಾಜ್ಯದ ವಿವಿಧ ವಿವಿಗಳ ಸುಮಾರು 150 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುವರು.ಶಿಬಿರದಲ್ಲಿ ಸಸಿ ನೆಡುವುದ ರಾಷ್ಟ್ರೀಯ ಭಾವೈಕ್ಯತೆಗೆ ಸಂಬಂಧಿಸಿದ ವಿಶೇಷ ಉಪನ್ಯಾಸ, ಯೋಗ ಹಾಗೂ ಧ್ಯಾನವನ್ನು ಮಾಡಿಸಲಾಗುವುದು ಎಂದರು.

ಡಿ.7ರ ಸಮಾರೋಪ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಫುಲ್ ಕುಮಾರ್, ಪ್ರಾಂಶುಪಾಲ ಡಾ.ಕೆ.ಎಲ್.ಕೃಷ್ಣ, ಡಾ.ಜಿ.ಪಾರ್ಥಸಾರಥಿ ಹಾಗೂ ಇತರರು ಭಾಗವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಎನ್.ಎಸ್.ಎಸ್.ಘಟಕಾಧಿಕಾರಿ ಡಾ.ಕೆ.ಎಲ್.ಕೃಷ್ಣ ಹಾಗೂ ಡಾ.ಜಿ.ಪಾರ್ಥಸಾರಥಿ ಉಪಸ್ಥಿತರಿದ್ದರು.

 

Leave a Reply

comments

Related Articles

error: