ಕ್ರೀಡೆಪ್ರಮುಖ ಸುದ್ದಿ

ಕಾಮನ್ ವೆಲ್ತ್ ಕ್ರೀಡಾಕೂಟ: ಟೇಬಲ್ ಟೆನ್ನಿಸ್ ನಲ್ಲಿ ಚಿನ್ನ ಜಯಿಸಿದ ಭಾರತ

ಗೋಲ್ಡ್ ಕೋಸ್ಟ್,ಏ.9-ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡ ಟೇಬಲ್ ಟೆನ್ನಿಸ್ ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಭಾರತ ತನ್ನ ಪದಕಗಳಿಕೆಯನ್ನು ಹೆಚ್ಚಿಸಿಕೊಂಡಿದೆ.

ಪುರುಷರ ವಿಭಾಗದ ಟೇಬಲ್ ಟೆನ್ನಿಸ್ ನಲ್ಲಿ ಭಾರತ ತಂಡ ನೈಜೀರಿಯಾ ತಂಡದ ವಿರುದ್ಧ 3-0 ಅಂತರದಲ್ಲಿ ಜಯ ಸಾಧಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತ್ತು.

ಸತಿಯನ್ ಜ್ಞಾನಶೇಖರನ್ ಮತ್ತು ಹರ್ಮೀತ್ ದೇಸಾಯಿ ಅವರು ಮೂರನೇ ಪಂದ್ಯವನ್ನು 11-8, 11-5, 11-3 ಅಂತರದಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಚಿನ್ನದ ಪದಕ ಪ್ರಾಪ್ತವಾಯಿತು.

ಈ ಮೂಲಕ ಭಾರತ 9 ಚಿನ್ನ, 4 ಬೆಳ್ಳಿ, 5 ಕಂಚಿನ ಪದಕ ಸೇರಿ ಒಟ್ಟು 18 ಪದಕಗಳನ್ನು ಜಯಿಸಿ ಮೂರನೇ ಸ್ಥಾನದಲ್ಲಿದೆ. (ಎಂ.ಎನ್)

Leave a Reply

comments

Related Articles

error: