ಕ್ರೀಡೆದೇಶಮನರಂಜನೆ

ಐಪಿಎಲ್‌ ವಿರುದ್ಧ ಗರಂ: ಕಪ್ಪು ಪಟ್ಟಿ ಧರಿಸಿ ಗಮನಸೆಳೆಯಲು ರಜನಿ ಸೂಚನೆ

ಚೆನ್ನೈ,ಏ.09: ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವೇಳೆ  ಚೆನ್ನೈಯಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಗಳನ್ನು ಏರ್ಪಡಿಸಿರುವುದಕ್ಕೆ ಚಿತ್ರನಟ ರಜನಿಕಾಂತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರು ಕಾವೇರಿ ನೀರಿನ ವಿಷಯದಲ್ಲಿ ಹೋರಾಟ ನಡೆಸುತ್ತಿರುವಾಗ ಐಪಿಎಲ್‌ ಪಂದ್ಯ ನಡೆಯುವುದು ಮುಜುಗರಕಾರಿ. ಒಂದು ಹಂತದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಚೆನ್ನೈನಲ್ಲಿ ಆಡಬಾರದು ಎಂದು ತಾಕೀತು ಮಾಡಿದ ಅವರು ಬಳಿಕ ಐಪಿಎಲ್‌ ಪಂದ್ಯ ನೋಡಲು ಹೋಗುವವರು ಕೂಡಾ ಕಪ್ಪು ಪಟ್ಟಿ ಧರಿಸಬೇಕು. ಈ ಮೂಲಕ ಸಮಸ್ಯೆ ಬಗ್ಗೆ ದೇಶದ ಗಮನ ಸೆಳೆಯಬೇಕು ಎಂದೂ ಅವರು ಹೇಳಿದ್ದಾರೆ.
ಚೆನ್ನೈ ತಂಡ ಸಿಇಒ ಕೆಎಸ್‌ ವಿಶ್ವನಾಥನ್‌ ಅವರು ಕಪ್ಪು ಪಟ್ಟಿ ಧರಿಸುವ ಬೇಡಿಕೆಗೆ ಸಮ್ಮತಿಸಿದ್ದಾರೆ. (ವರದಿ: ಪಿ.ಎಸ್ )

Leave a Reply

comments

Related Articles

error: