ಮೈಸೂರು

ನಡುರಸ್ತೆಯಲ್ಲಿಯೇ ಹೊತ್ತಿ ಉರಿದ ಕಾರು: ಮಕ್ಕಳ ಸಮೇತ ಚಾಲಕ ಪಾರು

ಮೈಸೂರು,ಏ.9:- ಮಾರುತಿ ಓಮ್ನಿ ಕಾರೊಂದು ನಡುರಸ್ತೆಯಲ್ಲಿಯೇ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಮೈಸೂರಿನ ಉದಯಗಿರಿ ರಸ್ತೆಯ ಸಾತಗಳ್ಳಿ ಬಸ್ ನಿಲ್ದಾಣದ ಸಮೀಪ ನಡೆದಿದೆ.

ಶಾಂತಿನಗರ ನಿವಾಸಿಯೊಬ್ಬರು ಮಕ್ಕಳನ್ನು ಶಾಲೆಯಿಂದ‌ ವಾಪಸ್ ಕರೆ ತರುತ್ತಿದ್ದಾಗ ಚಲಿಸುತ್ತಿರುವಾಗಲೇ ಬೆಂಕಿ ಹೊತ್ತಿಕೊಂಡು ಆತಂಕ ಸೃಷ್ಟಿಯಾಗಿತ್ತು. ತಕ್ಷಣ ಕಾರು‌ ನಿಲ್ಲಿಸಿದ ಚಾಲಕ ಮಕ್ಕಳನ್ನು ಕೆಳಗಿಳಿಸಿ ಅಪಾಯದಿಂದ ಪಾರಾಗಿದ್ದಾರೆ. ನಡು ರಸ್ತೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾರು ಉರಿದಿದೆ. ಸಾರ್ವಜನಿಕರು ಮಾಹಿತಿ ನೀಡಿದ್ದರೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: