ಮೈಸೂರು

ಏ.13 ರಿಂದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಅಂತರಾಷ್ಟ್ರೀಯ ಅಥ್ಲೇಟ್ ಅರ್ಜುನ್ ದೇವಯ್ಯ ಚಾಲನೆ

ಮೈಸೂರು, ಏ.9 : ಕೊಡವ ಸಮಾಜ ಕಲ್ಚರಲ್ ಮತ್ತು ಸ್ಪೋಟ್ಸ್ ಕ್ಲಬ್ ಮೈಸೂರು,ಮೈಸೂರು ಜಿಲ್ಲೆಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಿಂದ ಏ.13ರಿಂದ 15ರವರೆಗೆ ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಎಂ.ಪಿ.ನಾಣೈ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಏ.13ರಂದು ಬೆಳಿಗ್ಗೆ 9ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಗಂಗೋತ್ರಿ ಗ್ಲೇಡ್ಸ್ ಒಳಾಂಗಣ ಬ್ಯಾಡ್ಮಿಂಟನ್ ಅಂಕಣದಲ್ಲಿ ಅಂತರರಾಷ್ಟ್ರೀಯ ಅಥ್ಲೇಟ್, ಅರ್ಜುನ ಪ್ರಶಸ್ತಿ ಪುರಸ್ಕೃತ ಅರ್ಜುನ್ ದೇವಯ್ಯ ಅವರು ಪಂದ್ಯಾವಳಿಗೆ ಚಾಲನೆ ನೀಡುವರು ಎಂದು ತಿಳಿಸಿದರು.

ಏ.14 ಹಾಗೂ 15ರಂದು ವಿಜಯನಗರದ 1ನೇ ಹಂತದಲ್ಲಿರುವ ಕೊಡವ ಸಮಾಜ ಕಲ್ಚರಲ್ ಮತ್ತು ಸ್ಪೋಟ್ಸ್ ಸಭಾಂಗಣದಲ್ಲಿ ನಡೆಯಲಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಿಂದ ಸುಮಾರು 350 ರಿಂದ 400 ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಎಂದು ಹೇಳಿದರು

ಸ್ಪರ್ಧೆಯು ಬಾಲಕ, ಬಾಲಕಿಯರ ವಿಭಾಗಳಲ್ಲಿ ನಡೆಯಲಿದ್ದು, ವಯೋಮಿತಿ ಆಧಾರದ ಮೇಲೆ 10 13,15, 17, 19ರ ವಯಸ್ಸಿನ ಸಿಂಗಲ್ಸ್ ಹಾಗೂ ಡಬಲ್ಸ್ ಎರಡು ವಿಭಾಗಳಲ್ಲಿ ನಡೆಯಲಿದೆ. ಪ್ರತಿ ಒಂದು ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿಯೊಂದಿಗೆ ನಗದು ಬಹುಮಾನ ನೀಡಲಾಗುವುದು. ಅತ್ಯುತ್ತಮ ಮುಂಬರುವ ಆಟಗಾರ ಹಾಗೂ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ನೀಡಲಾಗುವುದು. ಪ್ರವೇಶ ಶುಲ್ಕ ಸಿಂಗಲ್ಸ್ ವಿಭಾಗಕ್ಕೆ 3 ನೂರು ರೂ., ಡಬಲ್ಸ್ ವಿಭಾಗಕ್ಕೆ 6.ನೂರು ರೂ. ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕ್ಲಬ್‌ನ ಪದಾಧಿಕಾರಿಗಳಾದ ಕೆ.ಪಿ.ಮುತ್ತಪ್ಪ, ಕೆ.ಎನ್.ಕುಶಾಲಪ್ಪ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: