ಮೈಸೂರು

ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ವಾಗತಕಾರರ ಕೊಠಡಿ ಉದ್ಘಾಟನೆ

ಮೈಸೂರು,ಏ.9-ನಗರದ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಾರ್ವಜನಿಕ ಸ್ವಾಗತಕಾರರ ಕೊಠಡಿಯನ್ನು ಸೋಮವಾರ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಉದ್ಘಾಟಿಸಿದರು.

ಈ ಸ್ವಾಗತಕಾರರ ಕೊಠಡಿಯಲ್ಲಿ ಸಾರ್ವಜನಿಕರಿಗಾಗಿಯೇ ಕುಡಿಯಲು ನೀರಿನ ವ್ಯವಸ್ಥೆ, ಟಿವಿ, ದೈನಂದಿನ ಪತ್ರಿಕೆಗಳು, ಜನಸ್ನೇಹಿ ಪೊಲೀಸ್ ಸಿಬ್ಬಂದಿ ಒಳಗೊಂಡಿರುತ್ತದೆ. ಸಾರ್ವಜನಿಕರು ತಮ್ಮ ದೂರು ಮತ್ತು ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ ತಕರಾರುಗಳು ಇನ್ನಿತರೆ ತೊಂದರೆಗಳನ್ನು ತಮ್ಮ ದೂರುಗಳ ಮುಖಾಂತರ ಸಲ್ಲಿಸಬಹುದಾಗಿದೆ.

ಈ ಸಂದರ್ಭದಲ್ಲಿ ಉಪ ಆಯುಕ್ತರಾದ ಎನ್.ವಿಷ್ಣವರ್ಧನ್, ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಆಯುಕ್ತ ವಿಕ್ರಂ ಆಮ್ಟೆ, ಎಸಿಪಿ ಟಿ.ಗೋಪಾಲ್, ಯೂನಿಲಾಗಿ ಕಂಪನಿಯ ಪ್ರೆಸಿಡೆಂಟ್ ರಾಮಚಂದ್ರ ರಾಜೇ ಅರಸ್, ಸಾಫ್ಟ್ ವಿಷನ್ ಕಂಪನಿಯ ರೈನಿಥಾಮಸ್, ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಿ.ಜಿ.ಪ್ರಕಾಶ್, ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: