ಕರ್ನಾಟಕ

ದುಷ್ಕರ್ಮಿಗಳಿಂದ ಅಡಿಕೆ ತೋಟ ನೆಲಸಮ: ರೈತನ ಆಕ್ರಂದನ

ದಾವಣಗೆರೆ,ಏ.09: ತೋಟದಲ್ಲಿದ್ದ ಅಡಿಕೆ ಮರಗಳ ದುಷ್ಕರ್ಮಿಗಳು ನೆಲಸಮ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶೇಖರಯ್ಯ ಎಂಬವರ ತೋಟದಲ್ಲಿದ್ದ ಸುಮಾರು 300ಕ್ಕೂ ಹೆಚ್ಚು ಅಡಿಕೆ ಮರಗಳು ಫಸಲಿಗೆ ಬಂದಿದ್ದವು.  ದುಷ್ಕರ್ಮಿಗಳು ರಾತ್ರೋರಾತ್ರಿ ಜೆಸಿಬಿ ತಂದು ಶೇಖರಯ್ಯ ಅವರ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಮರಗಳನ್ನು ಸಂಪೂರ್ಣ ನಾಶಮಾಡಿದ್ದಾರೆ. ಕಿಡಿಗೇಡಿಗಳು ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು  ಕಳೆದುಕೊಂಡ ರೈತನ ಅಕ್ರಂದನ ಮುಗಿಲು ಮುಟ್ಟಿದೆ. ಹಳೆಯ ದ್ವೇಷ ಇರೋ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಪಿ.ಎಸ್ )

Leave a Reply

comments

Related Articles

error: