
ಮೈಸೂರು
ಎಸ್. ಗೌರಿಪ್ರಿಯ ಭರತನಾಟ್ಯ ರಂಗಪ್ರವೇಶ ಡಿ.3ರಂದು
ಗುರುದೇವ ಅಕಾಡೆಮಿ ಅಫ್ ಫೈನ್ ಆರ್ಟ್ಸ್ ನ ಭರತನಾಟ್ಯ ಕಲಾವಿದೆ ಎಸ್.ಗೌರಿಪ್ರಿಯ ರಂಗಪ್ರವೇಶ ಮಾಡಲಿದ್ದಾರೆ ಎಂದು ಡಾ.ಚೇತನ ರಾಧಾಕೃಷ್ಣ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಮಾತನಾಡಿ, ಮೈಸೂರಿನ ಕಲಾಮಂದಿರದಲ್ಲಿ ಡಿ.3ರಂದು ಶನಿವಾರ ಸಂಜೆ 5.30ಕ್ಕೆ ರಂಗಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕೆ.ಎಸ್.ಜಿ.ಹೆಚ್. ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಡಾ.ಸರ್ವಮಂಗಳ ಶಂಕರ್, ಖ್ಯಾತ ಸಾಹಿತಿ ಡಾ.ಪ್ರದೀಪ್ಕುಮಾರ್ ಹೆಬ್ರಿ ಬೆಂಗಳೂರಿನ ಕಲಾವಿಮರ್ಷಕ ಡಾ.ಎಂ.ಸೂರ್ಯಪ್ರಸಾದ್ ಉಪಸ್ಥಿತರಿರುವರು. ಆಧ್ಯಾತ್ಮಿಕ ಪ್ರವಚನಕಾರ ಡಾ.ಪಾವಗಡ ಪ್ರಕಾಶ್ ಸಾನಿಧ್ಯ ವಹಿಸುವರು. ಗುರುದೇವ ಅಕಾಡೆಮಿ ಅಫ್ ಫೈನ್ ಆರ್ಟ್ಸ್ ನ ವಿದುಷಿ ಡಾ.ಚೇತನ ರಾಧಾಕೃಷ್ಣ ಹಾಗೂ ಬೆಂಗಳೂರಿನ ಚೇತನ ನೃತ್ಯ ನಿಕೇತನದ ಸಂಸ್ಥಾಪಕ ವಿದುಷಿ ಚೇತನ ಸುಂದರೇಶ್ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಲಾವಿದೆ ಗೌರಿ ಪ್ರಿಯ ಮಾತನಾಡಿ, ವಿದ್ಯಾವಿಕಾಸ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ್ದು ಕಾಲೇಜಿನಲ್ಲಿದ್ದಾಗ 10 ಮಂದಿಯನ್ನೊಳಗೊಂಡ ‘ನೂಪುರ್’ ತಂಡವನ್ನು ಕಟ್ಟಿಕೊಂಡು ಅಂತರ ಕಾಲೇಜುಮಟ್ಟದಲ್ಲಿ ಆಯೋಜಿಸುತ್ತಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರದರ್ಶನಗಳನ್ನು ನೀಡಲಾಗಿದೆ. 8ನೇ ವರ್ಷದಿಂದಲೂ ನೃತ್ಯಾಭ್ಯಾಸ ಮಾಡುತ್ತಿರುವೆ. ಪೋಷಕರ ಪ್ರೋತ್ಸಾಹವು ನನ್ನ ಸಾಧನೆಗೆ ಇಂಬು ನೀಡಿತು ಎಂದು ತಿಳಿಸಿದರು. ತಂದೆ ಸೇತುರಾಂ ಮಾತನಾಡಿ, ಮನೆಯಲ್ಲಿ ಬೃಹತ್ ಹಾಲ್ ನಿರ್ಮಿಸಲಾಗಿದ್ದು ಪ್ರತಿದಿನ ಬೆಳಗ್ಗೆ ಯೋಗ ತದನಂತರ ಸಂಗೀತ, ನೃತ್ಯ ಹಾಗೂ ವಾಧ್ಯ ತರಬೇತಿಗಾಗಿ ಉಚಿತವಾಗಿ ನೀಡಲಾಗುತ್ತಿದ್ದು ಕಲೆಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗೌರಿಪ್ರಿಯ ಅವರ ತಾಯಿ ಉಮಾ ಹಾಗೂ ಪ್ರೀತಮ್ ಶೆಣೈ ಉಪಸ್ಥಿತರಿದ್ದರು.