
ಪ್ರಮುಖ ಸುದ್ದಿ
ಸಿದ್ದರಾಮಯ್ಯ ಯಾವಾಗ ಜ್ಯೋತಿಷ್ಯರಾದ್ರೋ ಗೊತ್ತಿಲ್ಲ : ಜಗದೀಶ್ ಶೆಟ್ಟರ್ ಟೀಕೆ
ರಾಜ್ಯ(ಹುಬ್ಬಳ್ಳಿ)ಏ.10:- ಈಗಾಗಲೇ ಮೊದಲ ಕಂತಿನಲ್ಲಿ 72 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.ಟಿಕೇಟ್ ಸಿಗದವರು ಸಣ್ಣಪುಟ್ಟ ಅಸಮಾಧಾನ ವ್ಯಕ್ತಪಡಿಸಿರುವುದು ಸಹಜ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಟಿಕೇಟ್ ಸಿಗದೇ ಅಸಮಾಧಾನಗೊಂಡವರನ್ನು ಸಮಾಧಾನ ಪಡಿಸಲಾಗುವುದು. ಇನ್ನೂ ಎರಡು-ಮೂರು ದಿನದಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ನಮ್ಮ ಗುರಿ ಮಿಷನ್ 150 ತಲುಪುವುದು ಎಂದರು. ಬಿಜೆಪಿ 65 ರಿಂದ 70 ಸ್ಥಾನ ಗೆಲ್ಲುತ್ತದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು ಸಿದ್ದರಾಮಯ್ಯ ಯಾವಾಗ ಜ್ಯೋತಿಷ್ಯರಾದ್ರೋ ಗೊತ್ತಿಲ್ಲ. ಅವರ ಭವಿಷ್ಯವೇ ಅತಂತ್ರವಾಗಿದೆ. ಚಾಮುಂಡೇಶ್ವರಿ, ವರುಣ, ಬದಾಮಿ, ಗಂಗಾವತಿ ಹೀಗೆ ಕ್ಷೇತ್ರ ಹುಡುಕಿಕೊಂಡು ಓಡಾಡುತ್ತಿದ್ದಾರೆ. ಎಲ್ಲಿಯೂ ಅವರಿಗೆ ಗೆಲ್ಲುವ ಭರವಸೆ ಮೂಡುತ್ತಿಲ್ಲ. ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ರಾಜ್ಯದಲ್ಲಿ ಪ್ರವಾಸ ಮಾಡಿದ ಬಳಿಕ ಬಿಜೆಪಿ ಶಕ್ತಿ ಮತ್ತಷ್ಟು ವೃದ್ಧಿಸಿದೆ. ಜೆಡಿಎಸ್ ಕಾಂಗ್ರೆಸ್ ನ ಬಿ ಟೀಂ, ಅದನ್ನು ರಾಹುಲ್ ಗಾಂಧಿ ಉಲ್ಟಾ ಹೇಳಿದ್ದಾರೆ. ಸದನದಲ್ಲಿ ಜೆಡಿಎಸ್ ಯಾವತ್ತೂ ಕಾಂಗ್ರೆಸ್ ವಿರುದ್ಧ ಮಾತನಾಡಿಲ್ಲ. ಕಾಂಗ್ರೆಸ್, ಜೆಡಿಎಸ್ ಜೊತೆ ಬಿಜೆಪಿ ಗೆ ಸಮಾನ ಅಂತರವಿದೆ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)