ದೇಶ

ಟೈಫಾಯಿಡ್ ನಿಂದ ಬಳಲುತ್ತಿದ್ದಾರೆ ನಟ ರಣಬೀರ್ ಕಪೂರ್

ದೇಶ(ಮುಂಬೈ)ಏ.10:- ಬಾಲಿವುಡ್ ನಟ ರಣಬೀರ್ ಕಪೂರ್ ಅನಾರೋಗ್ಯ ಪೀಡಿತರಾಗಿದ್ದಾರೆ. ವೈದ್ಯಕೀಯ ವರದಿಯಲ್ಲಿ ಅವರಿಗೆ ಟೈಫಾಯಿಡ್ ಇದೆ ಎನ್ನಲಾಗಿದ್ದು, ಅವರು ಬ್ರಹ್ಮಾಸ್ತ್ರ ಚಿತ್ರಕ್ಕಾಗಿ ಡಯಟ್ ನಲ್ಲಿದ್ದರು ಎನ್ನಲಾಗಿದೆ.

ಸ್ನೇಹಿತ ಮತ್ತು ನಿರ್ದೇಶಕ ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಚಿತ್ರದ ಸಿದ್ಧತೆಯಲ್ಲಿ ಹಲವು ದಿನಗಳಿಂದಲೇ ತೊಡಗಿಸಿಕೊಂಡಿದ್ದು, ಕಠಿಣ ಡಯೆಟ್ ನಡೆಸಿದ್ದರು. ಇಂಗ್ಲಿಷ್ ನ ವೆಬ್ ಪೋರ್ಟಲ್ ಒಂದರ ವರದಿಯ ಪ್ರಕಾರ ರಣಬೀರ್ ಈಗ ವೈದ್ಯಕೀಯ ಆಹಾರಪದ್ಧತಿಯನ್ನು ಅನುಸರಿಬೇಕಿದೆಯಂತೆ. ಇದು ಹೊಟ್ಟೆಯ ಸ್ನಾಯುಗಳಿಗೆ ಬಲ ನೀಡಲಿದೆಯಂತೆ. ಆರೋಗ್ಯ ಹದಗೆಟ್ಟ ಕಾರಣ ಕಾರ್ಯಕ್ರಮಗಳನ್ನು ಮುಂದೂಡಿದ್ದಾರಂತೆ. ರಣಬೀರ್ ತಮ್ಮ ಕೋ-ಸ್ಟಾರ್ , ಮಾಜಿ ಸ್ನೇಹಿತೆ ದೀಪಿಕಾ ಪಡುಕೋಣೆ ಜೊತೆ ಫ್ಯಾಷನ್ ಶೋ ಒಂದರಲ್ಲಿ ಭಾಗವಹಿಸಬೇಕಿತ್ತು. ಆದರೆ ಆರೋಗ್ಯ ಹದಗೆಟ್ಟ ಕಾರಣ ಹೋಗಬೇಕಾದ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: