ಕರ್ನಾಟಕ

ಹುಲ್ಲುಮೆದೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು : ಹುಲ್ಲುಮೆದೆ ಮತ್ತು ಗುಡಿಸಲು ಸಂಪೂರ್ಣ ಭಸ್ಮ

ರಾಜ್ಯ(ಚಾಮರಾಜನಗರ)ಏ.10:-  ಹುಲ್ಲು ಮೇದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಹುಲ್ಲುಮೆದೆ ಮತ್ತು ಗುಡಿಸಲು ಸಂಪೂರ್ಣ ಭಸ್ಮವಾದ ಘಟನೆ ತಾಲೂಕಿನ ಉಡಿಗಾಲ ಗ್ರಾಮದಲ್ಲಿ  ನಡೆದಿದೆ.

ಗ್ರಾಮದ ಗವಿಸ್ವಾಮಿ ಎಂಬವರಿಗೆ ಸೇರಿದ ಹುಲ್ಲಿನ ಮೆದೆ ಮತ್ತು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹುಲ್ಲಿನ ಮೆದೆ ಸುಟ್ಟು ಸಂಪೂರ್ಣ ಭಸ್ಮವಾಗಿದೆ. ಬೆಳಿಗ್ಗೆ 6.30 ರ ಸುಮಾರಿಗೆ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದ್ದು, ಗವಿಸ್ವಾಮಿ ಊರಿನಲ್ಲಿ ಇಲ್ಲದ ಸಮಯ ನೋಡಿ, ಯಾರೋ ಕಿಡಿಗೇಡಿಗಳು ಹುಲ್ಲು ಮೆದೆಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ.  ಮೂರು ಹುಲ್ಲಿನ ಮೆದೆ ಮತ್ತು ಗುಡಿಸಲು ಬೆಂಕಿಗಾಹುತಿಯಾಗಿದ್ದು, ಸುಮಾರು ಎರಡರಿಂದ ಮೂರು ಲಕ್ಷದ ವರೆಗೆ ನಷ್ಟ ಉಂಟಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: