ಮೈಸೂರು

ಕನ್ನಡವನ್ನು ಉಳಿಸಲು ಮುಂದಾಗಿ: ಪ್ರೊ. ನಾಗರಾಜ್ ಭಟ್

ಎರಡು ಸಾವಿರ ವರ್ಷಗಳಷ್ಟು ಹಳೆಯ ಇತಿಹಾಸವಿರುವ ಕನ್ನಡವನ್ನು ಇಂದು ಮೂಲೆಗುಂಪು ಮಾಡಲಾಗುತ್ತಿದೆ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಉಪನ್ಯಾಸಕ ನಾಗರಾಜ್ ಭಟ್ ಬೇಸರ ವ್ಯಕ್ತ ಪಡಿಸಿದರು.

ಮೈಸೂರಿನಲ್ಲಿರುವ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವವನ್ನು ಪ್ರೊ.ನಾಗರಾಜ್ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂಗ್ಲೀಷ್ ಪರಿಚಯವಾಗುವ ಮೊದಲೇ ಕನ್ನಡದಲ್ಲಿ ಹಲವಾರು ಸಾಹಿತ್ಯ ಕೃತಿಗಳು ಜನ್ಮತಾಳಿವೆ. ಕನ್ನಡದಲ್ಲಿಯೇ ಹಲವರು ವೇದಗಳನ್ನು ಉಪನಿಷತ್ತುಗಳನ್ನೂ ಹಾಡಿದ್ದಾರೆ. ಆದರೆ ಇಂದು ಎಲ್ಲವೂ ಕಂಪ್ಯೂಟರೀಕರಣಗೊಂಡು ಕನ್ನಡಕ್ಕೆ ಶತ್ರುವಾಗಿ ಬೆಳೆಯುತ್ತಿದೆ. ಎಲ್ಲರೂ ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ಆದರೆ ಕನ್ನಡ ಶ್ರೀಮಂತ ಸಾಹಿತ್ಯವನ್ನು ಕೊಟ್ಟಿದೆ ಎನ್ನುವುದನ್ನು  ಕನ್ನಡಿಗರು ಮರೆಯಬಾರದು ಎಂದರು.

ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡವನ್ನು ಉಳಿಸಲು ಕಂಕಣಬದ್ಧರಾಗಬೇಕು. ಯುವ ಪೀಳಿಗೆ ಕನ್ನಡವನ್ನು ಉಳಿಸಲು ಮುಂದಾಗಬೇಕು ಎಂದು ತಿಳಿಸಿದರು.

ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಪಿ.ಎಸ್. ನಾಯಕ, ಸ್ಟಡೀ ಸೆಂಟರ್ ನ ಡೀನ್ ಡಿ.ಟಿ.ಬಸವರಾಜ,  ಡಾ. ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: