ಕರ್ನಾಟಕ

ಪತ್ನಿಯ ಶೀಲ ಶಂಕಿಸಿದ ಪತಿ : ಅತ್ತೆ ಮತ್ತು ಪತ್ನಿ ಕೊಲೆ

ತುಮಕೂರು,ಏ.10: ಕುಡಿದ ಮತ್ತಿನಲ್ಲಿ ಅತ್ತೆ ಮತ್ತು ಪತ್ನಿಯನ್ನು ಹತ್ಯೆ ಮಾಡಿರುವ ಘಟನೆಯೊಂದು ತುಮಕೂರಿನ ಪಾವಗಡ ತಾಲೂಕಿನ ಗೌಡಿ ಹಟ್ಟಿಯಲ್ಲಿ ನಡೆದಿದೆ.

ರಾಮಾಂಜಿನಮ್ಮ(50), ನಾಗಮಣಿ(28) ಕೊಲೆಯಾದ ದುರ್ದೈವಿಗಳು. ಮಂಜುನಾಥ್ (30) ಹತ್ಯೆಗೈದ ಆರೋಪಿ. ಆರು ವರ್ಷಗಳಿಂದ ನಾಗಮಣಿಯನ್ನು ಮದುವೆಯಾಗಿದ್ದ. ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಶಂಕಿಸಿ ಕುಡಿದು ಬಂದು ಗಲಾಟೆ ಕೂಡ ಮಾಡುತ್ತಿದ್ದನು.

ತವರಿನಲ್ಲಿದ್ದ ಪತ್ನಿ ನಾಗಮಣಿಯನ್ನು ನೋಡಲು ಮಂಜುನಾಥ್ ಕುಡಿದು ಆಕೆಯ ಮನೆಗೆ ಹೋಗಿದ್ದಾನೆ. ಅಲ್ಲದೇ ಅಕ್ರಮ ಸಂಬಂಧ ವಿಚಾರವಾಗಿ ಮತ್ತೆ ಜಗಳ ಮಿತಿಮೀರಿ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ. ಈ ವೇಳೆ ನಾಗಮಣಿ ತಾಯಿ ಅಡ್ಡಬಂದಿದ್ದರಿಂದ ಇದರಿಂದ ಸಿಟ್ಟುಗೊಂಡ ಮಂಜುನಾಥ್ ಅತ್ತೆಯ ಮೇಲೂ ಮಚ್ಚು ಬೀಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಅತ್ತೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ : ಪಿ.ಎಸ್ )

Leave a Reply

comments

Related Articles

error: