ಸುದ್ದಿ ಸಂಕ್ಷಿಪ್ತ

ಸೂಕ್ಷ್ಮ ಜೀವಿಗಳು, ಆಹಾರ ಸುರಕ್ಷತೆ ಮತ್ತು ಹುದುಗುವಿಕೆ ಕುರಿತ ಕಾರ್ಯಕ್ರಮ

ಮೈಸೂರು,ಏ.10:- ಭಾರತವನ್ನು ಪ್ರಪಂಚದ ಕುಶಲತೆಯ ರಾಜಧಾನಿಯಾಗಿ ಪರಿವರ್ತಿಸುವ ರಾಷ್ಟ್ರೀಯ ಯೋಜನೆಯಡಿಯಲ್ಲಿ ಸಿಎಸ್ ಐ ಆರ್-ಸಿಎಪ್ ಟಿಆರ್ ಐನಲ್ಲಿ ಜೀವವಿಜ್ಞಾನ ಪದವೀಧರರನ್ನು ಆಹಾರ ಮತ್ತು ಆಹಾರ ಸಂಬಂಧಿತ ಕೃಗಾರಿಕೆಗಳಲ್ಲಿ ಕೆಲಸ ಮಾಡಲು ಬೇಕಾಗುವಂತಹ ಕುಶಲತೆ, ಅಭಿವೃದ್ಧಿ ಕಾರ್ಯಕ್ರಮವನ್ನು ಮೆ.28ರಿಂದ ಆರಂಭಿಸುವ ಕುರಿತು ಘೋಷಿಸಿದೆ.

ಆಹಾರ ಸೂಕ್ಷ್ಮ ಜೀವ ವಿಜ್ಞಾನವು ವಿವಿಧ ರೀತಿಯ ಸೂಕ್ಷ್ಮ ಜೀವಿಗಳ ಮತ್ತು ಆಹಾರಗಳ ಜೊತೆ ಇರುವ ಸಂಬಂಧಗಳ ಕುರಿತಾಗಿದೆ. ಈ ಕಾರ್ಯಕ್ರಮವು ಸೂಕ್ಷ್ಮ ಜೀವಿಗಳ ಆಹಾರ ಸುರಕ್ಷತೆ, ನೈರ್ಮಲ್ಯ, ಗುಣಮಟ್ಟ ಮತ್ತು ಸೂಕ್ಷ್ಮಜೀವಿಗಳ ಹುದುಗುವಿಕೆಯ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಆಹಾರ ಹಾಗೂ ಸಂಬಂಧಿತ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಆಸಕ್ತರಾದಂತಹ ಪದವೀಧರರಿಗೆ ಸಹಾಯ ಮಾಡಲಿದೆ. ಈ ಕಾರ್ಯಕ್ರಮದಲ್ಲಿ ಪದವೀಧರರರು, ಸ್ನಾತಕೋತ್ತರ ಪದವೀಧರರು, ಮತ್ತು 10+2 ತರಗತಿಗಳನ್ನು ಓದಿ ಆಹಾರ ಕೈಗಾರಿಕೆಗಳಲ್ಲಿ 3-5ವರ್ಷಗಳ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳೂ ಕೂಡ ಭಾಗವಹಿಸಬಹುದು. ಕಾರ್ಯಕ್ರಮದ ನಿಗದಿತ ಶುಲ್ಕ 30,000ರೂ.(ಒಬ್ಬರಿಗೆ) ಅರ್ಜಿಯನ್ನು ಸಲ್ಲಿಸಲು ಏ.20 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮುಖ್ಯಸ್ಥರು, ಸೂಕ್ಷ್ಮಜೀವಿ ಮತ್ತು ಹುದುಗುವಿಕೆ ತಂತ್ರಜ್ಞಾನ ವಿಭಾಗ, ಈ ಮೇಲ್ : [email protected] ಮೊ.ಸಂ.9739599259ನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: