ಸುದ್ದಿ ಸಂಕ್ಷಿಪ್ತ
ಮೋದಿ ಕಾರ್ಯ ಶ್ಲಾಘನೀಯ
ಪ್ರಧಾನಿ ಮೋದಿಯವರು ನೋಟು ನಿಷೇಧಿಸಿರುವ ಕ್ರಮ ಸ್ವಾಗತಾರ್ಹವಾದರೂ ನಿರ್ದಿಷ್ಟ ಗುರಿಯ ಕೊರತೆ ಕಂಡು ಬರುತ್ತಿದೆ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹೆಚ್.ವಿ.ಗಣೇಶ್ ತಿಳಿಸಿದ್ದಾರೆ.
ಡಿಸೆಂಬರ್ 31ರವರೆಗೆ ಸಂಗ್ರಹವಾಗುವ ಕಪ್ಪುಹಣದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿ ಮತ್ತು 2017-18ನೇ ಕೇಂದ್ರದ ಆಯವ್ಯಯದಲ್ಲಿ ಈ ಬೃಹತ್ ಸಂಗ್ರಹವಾದ ಹಣದ ಮೊತ್ತಕ್ಕೆ ಕೈಗೊಳ್ಳುವ ನಿಗದಿತ ಯೋಜನೆಗಳನ್ನು ನಮೂದಿಸಿ ಎಂದು ಅವರು ತಿಳಿಸಿದ್ದಾರೆ.