ಕ್ರೀಡೆಪ್ರಮುಖ ಸುದ್ದಿ

ಕಾಮನ್ ವೆಲ್ತ್ ಕ್ರೀಡಾಕೂಟ: ಶೂಟಿಂಗ್ ನಲ್ಲಿ ಕಂಚು ಗೆದ್ದ ಓಂ ಮಿಥರ್ವಾಲ್

ಗೋಲ್ಡ್ ಕೋಸ್ಟ್,ಏ.11-ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಓಂ ಮಿಥರ್ವಾಲ್ ಪುರುಷರ 50 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದರು.

ಕ್ರೀಡಾಕೂಟದ ಏಳನೇ ದಿನವಾದ ಬುಧವಾರ ಮಿಥರ್ವಾಲ್ ಕಂಚು ಗೆದ್ದುಕೊಂಡರು. ತೀವ್ರ ಪೈಪೋಟಿ ಇದ್ದ ಸ್ಪರ್ಧೆಯಲ್ಲಿ 18 ಶೂಟ್ಗಳ ಬಳಿಕ ಅಗ್ರಸ್ಥಾನದಲ್ಲಿದ್ದ ಮಿಥರ್ವಾಲ್ ಅವರನ್ನು 20ನೇ ಶೂಟ್ ವೇಳೆ ಎರಡನೇ ಸ್ಥಾನಕ್ಕೆ ಹಿಂದಿಕ್ಕುವಲ್ಲಿ ಆಸ್ಟ್ರೇಲಿಯಾದ ಡೇನಿಯಲ್ ರಿಪಚೋಲಿ ಯಶಸ್ವಿಯಾದರು. ಅಂತಿಮವಾಗಿ ಮಿಥರ್ವಾಲ್ ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಹಾಲಿ ಜಾಂಪಿಯನ್ ಜಿತು ರಾಯ್ ಫೈನಲ್ನಲ್ಲಿ ಮೊದಲಿಗರಾಗಿ ಹೊರಬಿದ್ದು ನಿರಾಸೆ ಮೂಡಿಸಿದರು.

45-48 ಕೆಜಿ ವಿಭಾಗದ ಮಹಿಳೆಯರ ಬ್ಯಾಕ್ಸಿಂಗ್ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ಭಾರತದ ಮೇರಿ ಕೋಮ್ ಶ್ರೀಲಂಕಾದ ಅನುಷಾ ದಿಲ್ರುಕ್ಷಿ ಕೊದ್ದಿತುವಕ್ಕು ಅವರನ್ನು ಸೋಲಿಸಿ ಫೈನಲ್ ‍ಪ್ರವೇಶಿಸಿದ್ದಾರೆ.

ಸ್ಕ್ವಾಷ್ನಲ್ಲಿ ಭಾರತದ ವಿಕ್ರಮ್ ಮಲ್ಹೋತ್ರಾ ಮತ್ತು ರಮೀತ್ ಟಂಡನ್ ಜೋಡಿ, ವೇಲ್ಸ್ ಪೀಟರ್ ಕ್ರೀಡ್ ಹಾಗೂ ಜೋಯೆಲ್ ಮಕಿನ್ ಅವರನ್ನು ಪುರುಷರ ಡಬಲ್ಸ್ ಎಫ್ ಗುಂಪಿನ ಪಂದ್ಯದಲ್ಲಿ ಸೋಲಿಸಿ ಮುನ್ನಡೆದಿದ್ದಾರೆ. (ಎಂ.ಎನ್)

Leave a Reply

comments

Related Articles

error: