ಮೈಸೂರು

ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್

ಮೈಸೂರು,ಏ.11:-  ಶ್ರೀಕ್ಷೇತ್ರ ಸುತ್ತೂರು ಮಠಕ್ಕೆ ತೆರಳಿದ ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್   ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದರು.

ಸುತ್ತೂರಿನಲ್ಲಿರುವ ಮಠಕ್ಕೆ ತೆರಳಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿ ಮಾಡಿದ ವಿ.ಶ್ರೀನಿವಾಸಪ್ರಸಾದ್ ಸ್ವಾಮೀಜಿಯವರ ಜೊತೆ ಉಭಯಕುಶಲೋಪರಿ ನಡೆಸಿ  ಒಂದು ಗಂಟೆಗೂ ಅಧಿಕ ಕಾಲ ಸ್ವಾಮೀಜಿಯವರ ಜೊತೆ ಚರ್ಚಿಸಿದರು. ಇದೇ ವೇಳೆ ಇತ್ತೀಚೆಗೆ ಬರೆದು ಲೋಕಾರ್ಪಣೆಗೊಳಿಸಿದ ಪುಸ್ತಕವನ್ನು ಶ್ರೀಗಳಿಗೆ ನೀಡಿದರು. ಈ ಸಂದರ್ಭ ಶ್ರೀನಿವಾಸ್ ಪ್ರಸಾದ್ ಬೆಂಬಲಿಗರು ಅವರ ಜೊತೆಗಿದ್ದರು.

ಚಾಮುಂಡೇಶ್ವರಿ, ವರುಣಾ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಗ್ಗು ಬಡಿಯಲು ಪ್ರಸಾದ್ ತಂತ್ರಗಾರಿಗೆ ನಡೆಸಿದ್ದಾರೆ. ನಂಜನಗೂಡು ಬೈ ಎಲೆಕ್ಷನ್ ಸೇಡು ತೀರಿಸಿಕೊಳ್ಳಲು ಶ್ರೀನಿವಾಸ್ ಪ್ರಸಾದ್ ಹವಣಿಸುತ್ತಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: