ಪ್ರಮುಖ ಸುದ್ದಿ

ಪ್ರಾದೇಶಿಕ ಆಯುಕ್ತರಿಗೆ 3 ಪುಟಗಳಲ್ಲಿ ಪತ್ರ ಬರೆದು ಉತ್ತರಿಸಿದ ರೋಹಿಣಿ ಸಿಂಧೂರಿ

ರಾಜ್ಯ(ಹಾಸನ)ಏ.11;- ಸಚಿವ ಎ. ಮಂಜು ಮತ್ತು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಶೀತಲ ಸಮರ ಮುಂದುವರೆದಿದ್ದು, ನಿಷ್ಪಕ್ಷಪಾತ ಚುನಾವಣೆಗಾಗಿ ಹಾಸನ ಡಿಸಿ ವರ್ಗಾವಣೆ ಮಾಡಿ ಎಂದು ಮನವಿ ಮಾಡಿ ಚುನಾವಣಾ ಆಯೋಗಕ್ಕೆ ಸಚಿವ ಎ. ಮಂಜು ಅವರು ನೀಡಿದ್ದ ದೂರಿನ ಕುರಿತು  ಹಾಸನ ಡಿಸಿ ರೋಹಿಣಿ ಸಿಂಧೂರಿ ಅವರು ಉತ್ತರ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ಕೇಳಿದ್ದ ಪ್ರಾದೇಶಿಕ ಆಯುಕ್ತರಿಗೆ 3 ಪುಟಗಳಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪತ್ರ ಬರೆದು ಉತ್ತರಿಸಿದ್ದಾರೆ. ಸಚಿವರಿಂದ ಸರ್ಕಾರಿ ಕಚೇರಿ ಬಳಕೆ ಹಾಗೂ ಬಗರ್ ಹುಕುಂ ಅಕ್ರಮದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಪ್ರಾದೇಶಿಕ ಆಯುಕ್ತರ ಎಲ್ಲಾ ಪ್ರಶ್ನೆಗೆ ದಾಖಲೆ ಪತ್ರ, ವಿಡಿಯೋ ಸಹಿತ ಉತ್ತರ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚುನಾವಣಾಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವಾಗುತ್ತಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಬಗರ್ ಹುಕುಂ ಸಾಗುವಳಿ ಯೋಜನೆಯಡಿ 1093 ಅರ್ಜಿಯನ್ನು ಹಳೇ ದಿನಾಂಕಕ್ಕೆ ವಿಲೇವಾರಿ ಮಾಡಿದ್ದಾರೆಂದು ಸಚಿವರ ವಿರುದ್ಧ ಜಿಲ್ಲಾಧಿಕಾರಿ ದೂರು ನೀಡಿದ್ದರು. ಈ ಕುರಿತು ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧವೇ ಸಚಿವ ಮಂಜು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: