ದೇಶ

ತಿಂಗಳಿಗೆ 10 ಲಕ್ಷ ರೂ. ಪರಿಹಾರ ಕೇಳಿದ ಹಸೀನ್ ಜಹಾನ್

ಕೋಲ್ಕತ್ತಾ,ಏ.11-ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅನೈತಿಕ ಸಂಬಂಧ ಹಾಗೂ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದ ಶಮಿ ಪತ್ನಿ ಹಸೀನ್ ಜಹಾನ್ ತನಗೆ ಮತ್ತು ತನ್ನ ಮಗಳ ಜೀವನ ನಿರ್ವಹಣೆಗಾಗಿ ತಿಂಗಳಿಗೆ 10 ಲಕ್ಷ ರೂ. ಪರಿಹಾರ ಒದಗಿಸಿಕೊಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅಲಿಪೋರ್ ಮೂರನೇ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಶಮಿ ಪತ್ನಿ ಹಸೀನ್ ಜಹಾನ್ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ನಾವು ಹೆಚ್ಚುವರಿ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವು. ಆದರೆ ನ್ಯಾಯಾಲಯವು ಅರ್ಜಿಯನ್ನು ತ್ವರಿತ ವಿಲೇವಾರಿಗೆ ಮೂರನೇ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಶಮಿ ಮತ್ತು ಇತರರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ, ಪ್ರಕರಣಕ್ಕೆ ಸಂಬಂಧಿಸಿ ಸಮನ್ಸ್ ತಲುಪಿದ 15 ದಿನಗಳೊಗಾಗಿ ಹಾಜರಾಗದೆ ಇದ್ದರೆ ನಿಮ್ಮ ಮೇಲೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಮುಂದಿನ ವಿಚಾರಣೆಯನ್ನು ಮೇ 4ಕ್ಕೆ ನಿಗದಿಪಡಿಸಿದೆ ಎಂದು ಹಸೀನಾ ಪರ ವಕೀಲ ಝಕೀರ್ ಹುಸೈನ್ ತಿಳಿಸಿದ್ದಾರೆ.

ಜಹಾನ್, ಶಮಿ ಮತ್ತು ಅವರ ತಾಯಿ ಅಂಜುಮಾನ್ ಅರಾ ಬೇಗಮ್, ಸಹೋದರಿ ಸಬೀನಾ ಅಂಜುಮ್, ಸಹೋದರ ಮುಹಮ್ಮದ್ ಹಸೀಬ್ ಅಹ್ಮದ್ ಮತ್ತು ಹಸೀಬ್ ಪತ್ನಿ ಶಮಾ ಪರ್ವೀನ್ ವಿರುದ್ಧ ದೂರು ದಾಖಲಿಸಿದ್ದಾರೆ. ಮೊದಲು ಜಹಾನ್ ಮಾ.8ರಂದು ಜಾದವ್ ಪುರ್ ಪೊಲೀಸ್ ಠಾಣೆಗೆ ಶಮಿ ಮತ್ತು ಇತರರ ವಿರುದ್ಧ ದೂರು ನೀಡಿದ್ದರು. (ಎಂ.ಎನ್)

 

Leave a Reply

comments

Related Articles

error: