ಪ್ರಮುಖ ಸುದ್ದಿ

ರಾಜ್ಯದಲ್ಲಿ ರಜನಿಕಾಂತ್ ಕಮಲಹಾಸನ್ ಸಿನಿಮಾ ಪ್ರದರ್ಶನ ನಿಷೇಧಿಸಲು ನಿರ್ಧಾರ : ಸಾ.ರಾ.ಗೋವಿಂದು

ರಾಜ್ಯ(ಬೆಂಗಳೂರು)ಏ.11:- ರಾಜ್ಯದಲ್ಲಿ ನಟರಾದ ರಜನಿಕಾಂತ್ ಮತ್ತು ಕಮಲಹಾಸನ್ ಸಿನಿಮಾ ಪ್ರದರ್ಶನಗಳನ್ನು ನಿಷೇಧಿಸಲು ನಿರ್ಧಿರಿಸಲಾಗಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ.

ಕರ್ನಾಟಕದ ವಿರುದ್ಧ ಕಾವೇರಿ ನೀರು ಹಂಚಿಕೆ ವಿಷಯವಾಗಿ ಹೇಳಿಕೆಗಳನ್ನು ನೀಡುತ್ತಿದ್ದು, ರಾಜ್ಯದಲ್ಲಿ ಈ ಇಬ್ಬರು ನಟರ ಚಿತ್ರಗಳನ್ನು ಪ್ರದರ್ಶಿಸಬಾರದು ಎಂದು ಕನ್ನಡಪರ ಸಂಘಟನೆಗಳ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸಾ.ರಾ.ಗೋವಿಂದು  ರಜನಿಕಾಂತ್ ಅವರು ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನವನ್ನು ಚಿತ್ರ ನಿರ್ಮಾಪಕರು, ವಿತರಕರು ಮತ್ತು ರಾಜ್ಯ ಸರ್ಕಾರದವರು ನೋಡಿಕೊಳ್ಳುತ್ತಾರೆ ಎಂದಿದ್ದರು.  ಸಿನಿಮಾ ಪ್ರದರ್ಶನ ನಿಷೇಧಿಸುವ ನಿರ್ಧಾರ ಸರ್ಕಾರ ತೆಗೆದುಕೊಳ್ಳಲಾರದೆಂಬ ನಂಬಿಕೆಯಿದೆ ಎಂದಿದ್ದರು. ಆದರೆ ನಾವು ರಾಜ್ಯದಲ್ಲಿ ರಜನಿ ಮತ್ತು ಕಮಲ್ ಚಿತ್ರಗಳನ್ನು ಪ್ರದರ್ಶನ ಮಾಡಬಾರದೆಂದು ನಿರ್ಧರಿಸಿದ್ದೇವೆ. ಅದರ ಜೊತೆ ಅವರ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ನೆಲೆಯೂರುವುದಕ್ಕೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: