ಕರ್ನಾಟಕಪ್ರಮುಖ ಸುದ್ದಿ

ಸಮಸ್ಯೆಗೆ ಹಿಂಸೆ ಪರಿಹಾರವಲ್ಲ, ಐಪಿಎಲ್ ಪಂದ್ಯದ ವೇಳೆ ಗಲಾಟೆ ಸರಿಯಲ್ಲ: ರಜನಿಕಾಂತ್

ಚೆನ್ನೈ (ಏ.11): ಕಾವೇರಿ ಜಲಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿರುವ ಬಗ್ಗೆ ರಜನಿಕಾಂತ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ರಜನಿಕಾಂತ್ ಅವರು “ನಮ್ಮ ಸಮಸ್ಯೆಗೆ ಹಿಂಸಾ ಮಾರ್ಗ ಪರಿಹಾರವಲ್ಲ. ನಮ್ಮ ಪ್ರತಿಭಟನೆಯೇನಿದ್ದರೂ ಶಾಂತವಾಗಿರಬೇಕು” ಎಂದಿದ್ದಾರೆ. ಪೊಲೀಸರ ಮೇಲಿನ ಹಲ್ಲೆಯನ್ನು ಕೂಡ ಖಂಡಿಸಿರುವ ರಜನಿಕಾಂತ್, “ಇಂತಹ ಕಿಡಿಗೇಡಿ ಕೃತ್ಯಗಳನ್ನು ಕೂಡಲೇ ನಿಯಂತ್ರಿಸಬೇಕಿದೆ. ಇಂತಹ ಬೆಳವಣಿಗೆ ದೇಶಕ್ಕೇ ಮಾರಕ. ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ರಜನಿಕಾಂತ್ ಆಗ್ರಹಿಸಿದ್ದಾರೆ.

Rajinikanth @rajinikanth
The worst form of violence in law and order situation is attack on uniformed personnel on duty.This form of violence has to be tackled immediately as it poses grave danger to our country.We need more stringent laws to punish the perpetrators of attack on police personnel on duty.

ತಮ್ಮ ಟ್ವೀಟ್ ನೊಂದಿಗೆ ಪ್ರತಿಭಟನಾ ನಿರತರು ಪೊಲೀಸರಿಗೆ ಥಳಿಸುತ್ತಿರುವ ವಿಡಿಯೋವನ್ನೂ ಕೂಡ ರಜನಿ ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ಮತ್ತು ಕರ್ನಾಟಕ ನಡುವಿನ ಕಾವೇರಿ ನೀರು ಹಂಚಿಕೆ ಕುರಿತಾಗಿ ಈಚೆಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ವಿರೋಧಿಸಿ ಚೆನ್ನೈನಲ್ಲಿನ ಐಪಿಎಲ್‌ ಪಂದ್ಯಗಳ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪ್ರತಿಭಟನಾಕಾರರು ದಾಂಧಲೆ ಎಬ್ಬಿಸಲು ಪ್ರಯತ್ನಿಸಿದ್ದರು.

ಈ ಬಗ್ಗೆ ಕರ್ನಾಟಕದಲ್ಲೀ ತೀವ್ರ ಅಸಮಾಧಾನ ಭುಗಿಲೆದ್ದಿತ್ತು. ಹಿರಿಯ ನಟ ಅನಂತ್ ನಾಗ್ ಅವರೂ ಕೂಡ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿ ರಜನಿಕಾಂತ್ ಮತ್ತು ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದರು. ಹೊಸ ಪೀಳಿಗೆಯ ನಾಯಕರಿಂದ ಹೊಸದನ್ನು ನಿರೀಕ್ಷಿಸಿದ್ದೆವು. ಆದರೆ ಹಳೆಯ ಜಗಳವನ್ನೇ ಮುಂದುವರಿಸುವ ಯೋಚನೆ ಇದ್ದರೆ ಕರ್ನಾಟಕವೂ ಕೂಟ ಇದೇ ಹಾದಿ ತುಳಿಯಬೇಕಾಗಬಹುದು ಎಂದು ನಟ ಅನಂತ್ ನಾಗ್ ಎಚ್ಚರಿಸಿದ್ದರು.(ಎನ್.ಬಿ)

Leave a Reply

comments

Related Articles

error: