ಮೈಸೂರು

ಅತಿ ವೇಗದಲ್ಲಿ ಬೈಸಿಕಲ್ ಚಾಲನೆ ಆಯತಪ್ಪಿ ಬಿದ್ದು ಬಾಲಕ ಸಾವು

ಮೈಸೂರು,ಏ.11:- ಅತಿ ವೇಗದಲ್ಲಿ ಬೈಸಿಕಲ್ ಚಾಲನೆ ಮಾಡಿಕೊಂಡು ಬಂದ ಬಾಲಕನೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ತಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.

ಮೃತನನ್ನು ಮಂಜು(6) ಎಂದು ಗುರುತಿಸಲಾಗಿದ್ದು, ಈತ ಅತಿವೇಗವಾಗಿ ಬೈಸಿಕಲ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಆಯತಪ್ಪಿ ಬಿದ್ದಿದ್ದು, ಬಾಲಕನ ಕುತ್ತಿಗೆಗೆ ಹ್ಯಾಂಡಲ್ ಒತ್ತಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ಗಾಯಗೊಂಡ ಬಾಲಕನನ್ನು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: