
ವಿದೇಶ
ಮಿಲಿಟರಿ ವಿಮಾನ ಪತನ: 100 ಕ್ಕೂ ಹೆಚ್ಚು ಮಂದಿ ಸಾವು
ಆಲ್ಜೀರ್ಸ್,ಏ.11-ಆಲ್ಜೀರಿಯನ್ ಮಿಲಿಟರಿ ವಿಮಾನವೊಂದು ಪತನಗೊಂಡು 100ಕ್ಕೂ ಹೆಚ್ಚು ಮೃತಪಟ್ಟಿರುವ ಘಟನೆ ರಾಜಧಾನಿ ಆಲ್ಜೀರ್ಸ್ನ ಹೊರಗೆ ನಡೆದಿದೆ.
ನೈಋತ್ಯ ಆಲ್ಜೀರಿಯಾದ ಬೆಚಾರ್ನತ್ತ ವಿಮಾನ ಹೊರಟ್ಟಿದ್ದಾಗ ಬೌಫಾರಿಕ್ ವಿಮಾನ ನಿಲ್ದಾಣದ ಹೊರಗೆ ದುರಂತಕ್ಕೀಡಾಗಿದೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿಗಳಿದ್ದರು.
ರಾಜಧಾನಿಯ ಪ್ರಮುಖ ರಸ್ತೆಯ ಬದಿಯಿಂದ ದಟ್ಟ ಕಪ್ಪು ಹೊಗೆ ಮೇಲೇಳುತ್ತಿರುವ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದು, ವಿಮಾನ ಪತನಗೊಂಡ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಹಾಗೂ ಜನಸಂದಣಿ ಇರುವುದು ದೃಶ್ಯಗಳಲ್ಲಿ ಕಾಣಿಸಿದೆ. (ಎಂ.ಎನ್)