
ಮೈಸೂರು
ಡಾ. ಟಿ.ವಿ. ನಾರಾಯಣ ಶಾಸ್ತ್ರಿಯವರಿಗೆ ಸನ್ಮಾನ
ಸಂವಹನ ಸಾಂಸ್ಕೃತಿಕ ಟ್ರಸ್ಟ್ ಮೈಸೂರು ವತಿಯಿಂದ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಶ್ರೀ ಶಿವರಾತ್ರಿಶ್ವರ ರಾಜೇಂದ್ರ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ 61 ನೆಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶ್ರೀಮತಿ ವೆಂಕಟಲಕ್ಷ್ಮಿ ಶಾಸ್ತ್ರಿ ಮತ್ತು ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ದಂಪತಿಯನ್ನು ಸನ್ಮಾನಿಸಲಾಯಿತು.
ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಎಚ್.ವಿ. ರಾಜೀವ್, ಮಾಜಿ ಶಾಸಕ ತೋಂಟದಾರ್ಯ, ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್, ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್.ಲೋಕಪ್ಪ, ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಪ್ರಭುಸ್ವಾಮಿ, ಕಾರ್ಯದರ್ಶಿ ಡಿ. ನಾಗೇಂದ್ರಪ್ಪ ಉಪಸ್ಥಿತರಿದ್ದರು.
ಇದೇ ಸಂದರ್ಭ ಶಾಸ್ತ್ರಿಯವರ ಸಾಹಿತ್ಯ ಕುರಿತು ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ “ಹಳಗನ್ನಡ ಸಾಹಿತ್ಯಕ್ಕೆ ಕೊಡೆಗೆ” ಕುರಿತು ಡಿ.ಬಿ. ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶಿವಾಜಿ ಜೋಯಿಸ್, “ಸಂಶೋಧನ ಕ್ಷೇತ್ರಕ್ಕೆ ಕೊಡುಗೆ” ಕುರಿತು ಕು.ಕ.ಅ. ಸಂಸ್ಥೆ ವಿಶ್ರಾಂತ ಪ್ರಾಧ್ಯಾಪಕ ಡಾ. ಎನ್.ಎಸ್. ತಾರಾನಾಥ್ ಅವರು ಮಾತನಾಡಿದರು.