ಮೈಸೂರು

ಮೈಸೂರು ವಿಭಾಗದಲ್ಲಿ ವೀರಶೈವ/ಲಿಂಗಾಯಿತರಿಗೆ ಆಧ್ಯತೆ ನೀಡಲು ಸಿಎಂ.ಗೆ ಒತ್ತಾಯ

ಮೈಸೂರು,ಏ.11 :  ಮೈಸೂರು ವಿಭಾಗದ 8 ಜಿಲ್ಲೆಗಳಲ್ಲಿ ವೀರಶೈವ ಮತ್ತು ಲಿಂಗಾಯಿತರನ್ನು ಕಾಂಗ್ರೆಸ್ ಪಕ್ಷವೂ ಸಂಪೂರ್ಣ ನಿರ್ಲಕ್ಷಿಸಿದೆ, ಆದ್ದರಿಂದ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಮೂಲಕ ಪ್ರಾತಿನಿಧ್ಯ ಕೊಡಬೇಕೆಂದು ಸಿಎಂ ಸಿದ್ದರಾಮ್ಯಯನವರಲ್ಲಿ ಮನವಿ ಮಾಡಿದ್ದಾರೆ.

ವೀರಶೈವ / ಲಿಂಗಾಯತ ಹಿತರಕ್ಷಣಾ ವೇದಿಕೆಯು ಈ ಬಗ್ಗೆ ಮನವಿ ಮಾಡಿದ್ದು ಮೈಸೂರಿನಲ್ಲಿ 3.50, ಚಾಮರಾಜನಗರದಲ್ಲಿ 2,20 ಮಂಡ್ಯ ಜಿಲ್ಲೆಯಲ್ಲಿ 1.70, ಹಾಸನ ಜಿಲ್ಲೆಗಳಲ್ಲಿ 2.5 ಲಕ್ಷ ಸಮುದಾಯದ ಮತದಾರರಿದ್ದಾರೆ, ಆದರೆ ಸಮುದಾಯದವರಿದ್ದಾರೆ. ಆದ್ದರಿಂದ ಮೈಸೂರು ವಿಭಾಗದ ಕೆ.ಆರ್.ಕ್ಷೇತ್ರ, ಚಾಮುಂಡೇಶ್ವರಿ, ಪಿರಿಯಾಪಟ್ಟಣ, ಚಾಮರಾಜನಗರ, ಗುಂಡ್ಲುಪೇಟೆ, ಮಡಿಕೇರಿ ಸೇರಿದಂತೆ ಸುಮಾರು 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂದು ಅಧ್ಯಕ್ಷ ಸಿ.ಪಿ.ತಮ್ಮಣ್ಣ ಪತ್ರ ಬರೆದು ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: