ಮೈಸೂರು

ಅಬಕಾರಿ ಅಕ್ರಮ ಚಟುವಟಿಕೆ: ದೂರು ಸಲ್ಲಿಸಿ

ಮೈಸೂರು, ಏ.12:-  ರಾಜ್ಯ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಅಕ್ರಮ ಮದ್ಯ ತಯಾರಿಕೆ, ಶೇಖರಣೆ, ಸಾಗಾಣಿಕೆ, ವಿತರಣೆ ಇನ್ನಿತರೆ ಅಬಕಾರಿ ಅಕ್ರಮದ ಬಗ್ಗೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳಲು 24*7  ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವಂತೆ ನಿಯಂತ್ರಣ ಕೊಠಡಿಯನ್ನು ತಾಲೂಕಿನಾದ್ಯಂತ ಸ್ಥಾಪಿಸಲಾಗಿದೆ.
ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ತಾತ್ಕಾಲಿಕವಾಗಿ ಪ್ರಾರಂಭಿಸಿರುವ ಟೋಲ್ ಫ್ರೀ ಸಂಖ್ಯೆ 18004255989 ಗೆ ಕರೆ ಮಾಡಿ ಅಬಕಾರಿ ಇಲಾಖೆಗೆ ಸಂಬಂಧಪಟ್ಟ ದೂರು ನೀಡಬಹುದಾಗಿದೆ. ನಿಯಂತ್ರಣ ಕೊಠಡಿಗಳ ದೂರವಾಣಿ ಸಂಖ್ಯೆಗಳ ವಿವರ    ಮೈಸೂರು ಜಿಲ್ಲಾ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಸ್ ಕಚೇರಿ ದೂರವಾಣಿ ಸಂಖ್ಯೆ 0821-2541863, ಮೈಸೂರು ಉಪವಿಭಾಗದ ಕಚೇರಿ-0821-2524060, 9448218552, ಹುಣಸೂರು ಉಪವಿಭಾಗ- 08222-252434, 9448253092, ಮೈಸೂರು 1- 0821-2438269, 9845333611, ಮೈಸೂರು 2 – 0821-2418274, 9448478858, ಮೈಸೂರು 3- 0821-2414035, 9611478378, ಮೈಸೂರು 4 -0821-2446670, 9036600199, ನಂಜನಗೂಡು ಕಚೇರಿ – 08221-224720, 9449267529, ಟಿ ನರಸಿಪುರ ಕಚೇರಿ- 08227-261674, 9449266432, ಹುಣಸೂರು ಕಚೇರಿ 08222-251690, 7899741234, ಕೆ.ಆರ್.ನಗರ ಕಚೇರಿ 08223-264801, 7353549061, ಪಿರಿಯಾಪಟ್ಟಣ ಕಚೇರಿ 08223-273373, 9740346588 ಹಾಗೂ  ಹೆಚ್.ಡಿ. ಕೋಟೆ ಕಚೇರಿ – 08228-257095, 9845638920ಗೆ ಕರೆ ಮಾಡಬಹುದಾಗಿದೆ.
ಅಕ್ರಮವಾಗಿ ಮದ್ಯ ತಯಾರಿಕೆ, ಶೇಖರಣೆ, ಸಾಗಾಣಿಕೆ, ವಿತರಣೆ ಇನ್ನಿತರೆ ಅಬಕಾರಿ ಅಕ್ರಮದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಮೈಸೂರು ಜಿಲ್ಲಾ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಸ್ ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: