ಕರ್ನಾಟಕ

ಕುಂಬ್ಳೆ, ದ್ರಾವಿಡ್‍ರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಯತ್ನ

ಬೆಂಗಳೂರು (ಏ.12): ರಾಜಕೀಯ ಪಕ್ಷಗಳು ಸಿನಿಮಾ ತಾರೆಯರು ಮತ್ತು ಕ್ರಿಕೆಟಿಗರನ್ನು ಓಲೈಸುವುದು ಭಾರತದಲ್ಲಿ ಸಾಮಾನ್ಯ.

ಕರ್ನಾಟಕ ವಿಧಾಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರನ್ನು ಸೆಳೆಯಲು ಬಿಜೆಪಿ ನಾಯಕರು ಕಸರತ್ತು ಮಾಡುತ್ತಿದ್ದಾರೆ. ಯುವಜನತೆಯನ್ನು ಆಕರ್ಷಿಸಲು ಕ್ರಿಕೆಟ್ ರಂಗದ ಖ್ಯಾತನಾಮರಾದ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಅವರನ್ನು ಬಿಜೆಪಿಯತ್ತ ಸೆಳೆಯಲು ಪ್ರಯತ್ನಗಳು ನಡೆದಿವೆ.

ಕಳೆದ ಎರಡು ವಾರಗಳಿಂದ ಬಿಜೆಪಿ ಈ ಕೆಲಸದಲ್ಲಿ ನಿರತವಾಗಿತ್ತು. ಯಾವುದೇ ವಿವಾದವಿಲ್ಲದ ಕುಂಬ್ಳೆ ಹಾಗೂ ದ್ರಾವಿಡ್ ಜೊತೆ ಅನೇಕ ಸುತ್ತಿನ ಮಾತುಕತೆ ಕೂಡ ನಡೆದಿದೆ. ಇಬ್ಬರಲ್ಲಿ ಒಬ್ಬರಿಗಾದ್ರೂ ಪಕ್ಷದ ಟಿಕೆಟ್ ಕೊಡಿಸುವ ನಿರ್ಧಾರಕ್ಕೆ ಬಂದಿತ್ತು. ಆದ್ರೆ ಇಬ್ಬರೂ ಆಟಗಾರರು ರಾಜಕೀಯದಿಂದ ದೂರವುಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಈ ಕ್ರಿಕೆಟಿಗರು ಆಹ್ವಾನವನ್ನು ತಿರಸ್ಕರಿಸಿದ್ದರೂ ಬಿಜೆಪಿ ತನ್ನ ಪ್ರಯತ್ನ ನಿಲ್ಲಿಸಿಲ್ಲ. ಇಬ್ಬರಲ್ಲಿ ಒಬ್ಬರನ್ನು ರಾಜ್ಯಸಭೆ ಹಾಗೂ ಇನ್ನೊಬ್ಬರನ್ನು ಲೋಕಸಭೆ ಚುನಾವಣೆಗೆ ಇಳಿಸುವ ಪ್ರಯತ್ನದಲ್ಲಿ ಪಕ್ಷ ನಿರತವಾಗಿದೆ. ನಾವು ಭರವಸೆ ಕಳೆದುಕೊಂಡಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ. (ಎನ್.ಬಿ)

Leave a Reply

comments

Related Articles

error: