ದೇಶವಿದೇಶ

ನನ್ನ ಖಾತೆಗೂ ಕೇಂಬ್ರಿಡ್ಜ್ ಅನಾಲಿಟಿಕಾ ಕನ್ನ ಕೊರೆದಿದೆ: ಜು಼ಕರ್ ಬರ್ಗ್!

ವಾಷಿಂಗ್ಟನ್ (ಏ.12): ತಮ್ಮದೇ ವೈಯಕ್ತಿಕ ಖಾತೆಯ ಖಾಸಗಿ ಮಾಹಿತಿಗಳೂ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಗೆ ಸೋರಿಕೆಯಾಗಿದೆ ಎಂದು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜು಼ಕರ್’ಬರ್ಗ್ ಹೇಳಿದ್ದಾರೆ. ಅಮೆರಿಕ ಸೆನೆಟ್’ನ ವಾಣಿಜ್ಯ ಮತ್ತು ನ್ಯಾಯಾಂಗ ಸಮಿತಿ ಮುಂದೆ ಬುಧವಾರ ಎರಡನೇ ದಿನದ ವಿಚಾರಣೆ ವೇಳೆ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.

ಬಳಕೆದಾರರ ಖಾಸಗಿ ಮಾಹಿತಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಇದೇ ಸಂದರ್ಭದಲ್ಲಿ ಜು಼ಕರ್ ಬರ್ಗ್ ಉತ್ತರ ನೀಡಿದರು. ಬಳೆದಾರರ ಮಾಹಿತಿ ಸಂಗ್ರಹಿಸಿ ಅವುಗಳನ್ನು ಬಳಕೆ ಮಾಡಲು ಯಾವ ಮಿತಿ ಹೇರಿಕೊಂಡಿದ್ದೀರಿ ಎಂಬ ಪ್ರಶ್ನೆಯನ್ನು ಸಮಿತಿ ಸದಸ್ಯರು ಜು಼ಕರ್ ಬರ್ಗ್ ಮುಂದಿಟ್ಟರು.

ಇದಕ್ಕೆ ಉತ್ತರಿಸಿದ ಜು಼ಕರ್’ಬರ್ಗ್ ಬಳಕೆದಾರರು ಅವರು ಬಯಸಿದರೆ ಫೇಸ್ಬುಕ್ ಅನ್ನು ತೊರೆಯಬಹುದು. ತಮಗೆ ಬೇಕಾದಾಗ ಫೇಸ್ಬುಕ್ ಮಾಹಿತಿಯನ್ನು ಬಳಕೆದಾರರು ಡಿಲೀಟ್ ಮಾಡಬಹುದು ಎಂದು ಹೇಳಿದರು. ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಮತ್ತು ಅದನ್ನು ನಾವು ಬಳಸುವ ಪ್ರಕ್ರಿಯೆಯನ್ನು ಫೇಸ್ಬುಕ್ ಮಿತಿಗೊಳಿಸುತ್ತಿದೆ. ಪ್ರೈವಸಿ ಪ್ರೊಟೆಕ್ಟಿವ್ ಆಯ್ಕೆಯನ್ನು ನಾವು ಬದಲಾಯಿಸುತ್ತಿದ್ದೇವೆ ಎಂದು ಜು಼ಕರ್ ಬರ್ಗ್ ಹೇಳಿದ್ದಾರೆ.

ಇದೇ ವೇಳೆ ಭಯೋತ್ಪಾದಕ ಸಂಘಟನೆಯಂಥವರು ಫೇಸ್ಬುಕ್ ದತ್ತಾಂಶಗಳನ್ನು ನಾಶ ಮಾಡಿದರೆ ಏನು ಮಾಡುವುದು ಎಂಬ ಪ್ರಶ್ನೆಗೆ, ಯಾವುದೇ ಕ್ರಿಮಿನಲ್ ಮತ್ತು ಉಗ್ರ ಸಂಘಟನೆಗಳು ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಒಟ್ಟಾರೆ ನಾವು ಯಾವುದೇ ದ್ವೇಷ ಹರಡುವ ಗುಂಪುಗಳಿಗೆ ಫೇಸ್ಬುಕ್ ನಿರ್ಬಂಧಿಸಲಿದೆ ಎಂದು ಜು಼ಕರ್ ಬರ್ಗ್ ಗೆ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: