ಮೈಸೂರು

ಮಯೂರ ಕನ್ನಡ ಗೆಳೆಯರ ಬಳಗದಿಂದ ಡಾ.ರಾಜ್ ಪುಣ್ಯಸ್ಮರಣೆ

ಮೈಸೂರು,ಏ.12-ಡಾ.ರಾಜ್ ಕುಮಾರ್ ರವರ ೧೨ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಮಯೂರ ಕನ್ನಡ ಗೆಳೆಯರ ಬಳಗದ ವತಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಡಾ.ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ವರನಟ ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗದ ಧೃವತಾರೆ. ರಾಜ್ ಎಂದರೆ ಕನ್ನಡ. ಕನ್ನಡ ಎಂದರೆ ರಾಜ್ ಎನ್ನುವ ಮಟ್ಟಕ್ಕೆ ಕನ್ನಡ ತನವನ್ನು ಮತ್ತು ಭಾಷೆಯನ್ನು ವಿಶ್ವವಿಖ್ಯಾತಗೊಳಿಸಿದರು. ಪ್ರತಿಯೊಬ್ಬ ಕಲಾವಿದನಿಗೂ ಸ್ಫೂರ್ತಿಯಾಗಿ, ಧೈರ್ಯವಾಗಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡತನ ಜೀವಂತವಾಗಿರುವ ಕರುನಾಡ ಕಣ್ಮಣಿ ಕೀರ್ತಿಪುರುಷ ಡಾ.ರಾಜ್ ಕುಮಾರ್ ಎಂದರು.

ಹಿರಿಯ ಸಮಾಜ ಸೇವಕ ರಘುರಾಂ ವಾಜಪೇಯಿ ಮಾತನಾಡಿ, ಡಾ.ರಾಜ್ ಕುಮಾರ್ ರವರು ಮಾಡದ ಪಾತ್ರವಿಲ್ಲ. ತಮ್ಮ ನಟನೆಯ ಮೂಲಕ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಅವರು ಕನ್ನಡ ಚಿತ್ರಗಳನ್ನು ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸಲೇ ಇಲ್ಲ. ಇದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿ. ಅವರ ಬಹುತೇಕ ಚಿತ್ರಗಳನ್ನು ನೋಡಿ ಹಲವರು ತಮ್ಮ ಜೀವನವನ್ನೇ ಬದಲಾಯಿಸಿಕೊಂಡಿದ್ದಾರೆ. ಬಂಗಾರದ ಮನುಷ್ಯ ಚಿತ್ರ ನೋಡಿ ನಗರ ಪ್ರದೇಶದ ಯುವಕರು ಹಳ್ಳಿಯತ್ತ ಹೋಗಿ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಯೂರ ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ಶ್ರೀನಾಥ್ ಬಾಬು, ರಾಘವೇಂದ್ರ, ಸೋಮಶೇಖರ್, ರಾಜಗೋಪಾಲ್, ಶೇಖರ್, ಕಿಶೋರ್ ಕುಮಾರ್, ಓಂಶಿವು, ರಾಜೇಶ್, ಮೋಹನ್, ವಾಸುದೇವ ಅಯ್ಯಂಗಾರ್ ಇತರರು ಹಾಜರಿದ್ದರು. (ಕೆ.ಎಸ್, ಎಚ್.ಎನ್, ಎಂ.ಎನ್)

Leave a Reply

comments

Related Articles

error: