ಕ್ರೀಡೆಪ್ರಮುಖ ಸುದ್ದಿ

ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಎರಡು ಚಿನ್ನ, ಎರಡು ಬೆಳ್ಳಿ, ಒಂದು ಕಂಚು

ಗೋಲ್ಡ್ ಕೋಸ್ಟ್,ಏ.12-ಕಾಮನ್ ವೆಲ್ತ್ ಕ್ರೀಡಾಕೂಟದ 8ನೇ ದಿನವಾದ ಗುರುವಾರ ಭಾರತಕ್ಕೆ ಐದು ಪದಕಗಳು ಸಿಕ್ಕಿವೆ. ಕುಸ್ತಿಯಲ್ಲಿ ಎರಡು ಚಿನ್ನ, ಒಂದು ಬೆಳ್ಳಿ, ಒಂದು ಕಂಚು ಹಾಗೂ ಶೂಟಿಂಗ್ ನಲ್ಲಿ ಒಂದು ಬೆಳ್ಳಿ ಪದಕ ಭಾರತಕ್ಕೆ ಲಭಿಸಿವೆ.

ಪುರುಷರ 57 ಕೆಜಿ ವಿಭಾಗದ ಕುಸ್ತಿಯಲ್ಲಿ ಚಿನ್ನ ಗೆದ್ದ ರಾಹುಲ್ ಅವಾರೆ.

ಭಾರತದ ಕುಸ್ತಿಪಟುಗಳಾದ ಸುಶೀಲ್ ಕುಮಾರ್, ರಾಹುಲ್ ಅವಾರೆ ಚಿನ್ನ ಹಾಗೂ ಬಬಿತಾ ಕುಮಾರಿ ಬೆಳ್ಳಿ, ಕಿರಣ್ ಕಂಚು ಜಯಿಸಿದ್ದಾರೆ. ಶೂಟರ್ ತೇಜಸ್ವಿನಿ ಸಾವಂತ್ ಬೆಳ್ಳಿ ಪದಕ ಜಯಿಸಿದ್ದಾರೆ.

ಮಹಿಳೆಯರ 53 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ಬಬಿತಾ ಕುಮಾರಿ.

ಪುರುಷರ 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಸುಶೀಲ್ ಕುಮಾರ್, 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ರಾಹುಲ್ ಅವಾರೆ ಚಿನ್ನ ಜಯಿಸಿದ್ದಾರೆ. ಸುಶೀಲ್ ಕುಮಾರ್ ದಕ್ಷಿಣ ಆಫ್ರಿಕಾದ ಬೋಧಾ ಜೋಹಾನೆಸ್ ವಿರುದ್ಧ ಜಯ ಸಾಧಿಸಿದರೆ, ರಾಹುಲ್ ಅವಾರೆ ಕೆನಡಾದ ಸ್ಟೀವನ್ ಟಕಹಶಿ ಅವರನ್ನು 15-7 ಅಂತರದಿಂದ ಸದೆ ಬಡಿದು ಸ್ವರ್ಣ ಜಯಿಸಿದ್ದಾರೆ.

ಮಹಿಳೆಯರ 53 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಕೆನಡಾದ ಡಿಯಾನಾ ವಿಕೆರ್‌ಗೆ 2-5 ಅಂತರದಿಂದ ಶರಣಾದ ಬಬಿತಾ ಬೆಳ್ಳಿ ಪದಕ ಜಯಿಸಿದ್ದು, 76 ಕೆಜಿ ಮಹಿಳೆಯರ ವಿಭಾಗದಲ್ಲಿ ಕಿರಣ್ ಅವರು ಕಂಚಿನ ಪದಕ ಜಯಿಸಿದ್ದಾರೆ.

ಮಹಿಳೆಯರ 50 ಮೀ ಶೂಟಿಂಗ್ ನಲ್ಲಿ ಬೆಳ್ಳಿ ಗೆದ್ದ ತೇಜಸ್ವಿನಿ ಸಾವಂತ್.

ಇನ್ನು ಮಹಿಳೆಯರ 50 ಮೀ. ರೈಫಲ್ ಪ್ರೋನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ತೇಜಸ್ವಿನಿ ಸಾವಂತ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ತೇಜಸ್ವಿನಿ ಸಾವಂತ್ ಒಟ್ಟು 618.9 ಅಂಕ ಪಡೆಯುವ ಮೂಲಕ ಬೆಳ್ಳಿ ಪದಕ ಜಯಿಸಿದರು. ಸಿಂಗಪೂರದ ಮಾರ್ಟಿನ್ ಲಿಂಡ್ಸೆ ವೆಲಾಸೊ 621 ಅಂಕಗಳ ಮೂಲಕ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಒಟ್ಟು 14 ಚಿನ್ನ, 6 ಬೆಳ್ಳಿ, 9 ಕಂಚು ಒಟ್ಟು 29 ಪದಕಗಳನ್ನು ಗಳಿಸಿದೆ. (ಎಂ.ಎನ್)

Leave a Reply

comments

Related Articles

error: