ಮೈಸೂರು

ಜೆ.ಎಸ್.ಎಸ್.ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕೋತ್ಸವ ಆಚರಣೆ

ಮೈಸೂರಿನ ಜೆ.ಪಿ.ನಗರದ ಜೆ.ಎಸ್.ಎಸ್.ಪಬ್ಲಿಕ್ ಶಾಲೆಯಲ್ಲಿ  22ನೇ ಶಾಲಾ ವಾರ್ಷಿಕೋತ್ಸವವನ್ನು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಆಚರಿಸಲಾಯಿತು. ಸಮಾರಂಭ ಅಧ್ಯಕ್ಷತೆಯನ್ನು ಜೆ.ಎಸ್.ಎಸ್.ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ್‍ಸೂರ್‍ಮಠ್  ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಎಂ.ಮಹೇಶ್‍ ಆಗಮಿಸಿದ್ದು ಮುಖ್ಯ ಭಾಷಣಕಾರರಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಕ್ಕ ಮಹಾದೇವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕಿ  ಡಾ. ಕವಿತಾ ರೈ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್.ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್  ಉಪಸ್ಥಿತರಿದ್ದರು.

ಶಾಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ  ಬಹುಮಾನ ವಿತರಿಸಲಾಯಿತು. ಎಲ್.ಕೆ.ಜಿ. ಯಿಂದ 10ನೇ ತರಗತಿಯವರೆಗೆ ಅತ್ಯುತ್ತಮ ಅಂಕ ಪಡೆದಿದ್ದ ಪ್ರತಿಭಾನ್ವಿತರಿಗೂ ಹಾಗೂ ಸಿ.ಬಿ.ಎಸ್.ಇ. ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಗಳಿಸಿದ್ದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಲಾಯಿತು. ಅಲ್ಲದೆ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ  ಒಟ್ಟಾರೆ  ಹೆಚ್ಚು ಅಂಕ ಪಡೆದಿದ್ದ ಲಾಲ್ ಬಹದ್ದೂರ್ ಶಾಸ್ತ್ರೀ ತಂಡವು ಸಾಂಸ್ಕೃತಿಕ ಚಟುವಟಿಕಾ ವಿಭಾಗದ ಪಾರಿತೋಷಕವನ್ನು ಪಡೆದರೆ, ಕ್ರೀಡಾ ಪಾರಿತೋಷಕವನ್ನು ರಾಮಾನುಜನ್ ತಂಡವು ಪಡೆದುಕೊಂಡಿತು.

ಮೂರು ಗಂಟೆಗಳ ಕಾಲ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯ 400ಕ್ಕೂ ಹೆಚ್ಚು ಮಕ್ಕಳು ನಡೆಸಿಕೊಟ್ಟ  “ಪೌರಾಣಿಕ” ವಿಷಯ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಿವಸ್ತುತಿ, ವಿನಾಯಕ ಸ್ತುತಿ, ಆದಿಶಕ್ತಿ, ನವದುರ್ಗೆ, ಶಿವಲೀಲಾ, ಶಿವತಾಂಡವ ಹಾಗೂ ಬೃಂದಾವನ ನೃತ್ಯಗಳು. ಕೃಷ್ಣನ ಬಾಲಲೀಲೆ, ದಶಾವತಾರ ನೃತ್ಯ ರೂಪಕಗಳು. ದುಷ್ಯಂತ-ಶಾಕುಂತಲಾ, ಭಕ್ತ-ಪ್ರಹ್ಲಾದ, ಕೃಷ್ಣ-ಸುಧಾಮ, ದುರ್ಯೋಧನನ ಊರುಭಂಗ ಹಾಗೂ ಶ್ರೀಕೃಷ್ಣ ಸಂಧಾನ  ನಾಟಕಗಳು ಅರ್ಥಪೂರ್ಣವಾಗಿ ಮೂಡಿಬಂದವು.

Leave a Reply

comments

Related Articles

error: