ವಿದೇಶ

ನಿಯಂತ್ರಣ ತಪ್ಪಿದ ಲಾರಿ ಪಲ್ಟಿ: ವಿಡಿಯೋ ವೈರಲ್

ಬೀಜಿಂಗ್,ಏ.12: ಚಾಲಕ ಹೈವೇಯೊಂದರಲ್ಲಿ ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿರುವ ಸಾಮಾಜಿಕ ಜಾಲತಾಣ ವೈರಲ್ ಆಗಿದೆ.

ಈ ಘಟನೆ ಏಪ್ರಿಲ್ 10 ರಂದು ಚೀನಾದ ಶಾಂಗ್ ಹೈವಿಸ್ಟ್ ಹೈವೇನಲ್ಲಿ ನಡೆದಿದೆ. ವೇಗವಾಗಿ ವಾಹನಗಳು ಚಾಲಿಸುತ್ತಿದ್ದ ವೇಳೆ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿ ನಡುರಸ್ತೆಯಲ್ಲೇ ಕಾರು ನಿಲ್ಲಿಸಿದ್ದಾನೆ. ಈ ವೇಳೆ ಕಾರಿನ ಹಿಂದೆ ಬರುತ್ತಿದ್ದ ಕಂಟೈನರ್ ಲಾರಿ ಚಾಲಕ ಕಾರಿನೊಂದಿಗೆ ಅಪಘಾತ ತಪ್ಪಿಸಲು ಯತ್ನಿಸಿದ್ದಾನೆ. ಪರಿಣಾಮವಾಗಿ ಕಂಟೈನರ್ ಲಾರಿ ಪಲ್ಟಿಯಾಗಿದೆ. ಕಂಟೈನರ್ ಪಲ್ಟಿಯಾಗುತ್ತಿದ್ದಂತೆ ಮತ್ತೊಬ್ಬ ಲಾರಿ ಚಾಲಕ ಮುನ್ನೆಚ್ಚರಿಕೆ ವಹಿಸಿ ತನ್ನ ವಾಹನ ನಿಲ್ಲಿಸಿದ್ದಾನೆ. ಬಳಿಕ ಕಾರು ಚಾಲಕ ಹೈವೇಯ ಮತ್ತೊಂದು ದಾರಿ ಬಳಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಕಾರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ: ಪಿ.ಎಸ್ )

Leave a Reply

comments

Related Articles

error: