ದೇಶ

ಜನ್ ಧನ್‍ ಖಾತೆಗಳಲ್ಲಿನ ವಿತ್‍ ಡ್ರಾ ಮಿತಿ 10 ಸಾವಿರ ರೂ.ಗೆ ಕಡಿತ

ಭಾರತೀಯ ರಿಸರ್ವ್ ಬ್ಯಾಂಕ್ ಜನ್ ಧನ್‍ ಖಾತೆಗಳಲ್ಲಿನ ವಿತ್‍ ಡ್ರಾ ಮಿತಿಯನ್ನು 10 ಸಾವಿರ ರೂ.ಗೆ ಕಡಿತಗೊಳಿಸಿದೆ.

ನೋಟು ನಿಷೇಧದ ಬಳಿಕ ಜನ್‍ ಧನ್ ಖಾತೆಗಳಲ್ಲಿ ಅಪಾರ ಪ್ರಮಾಣದ ಠೇವಣಿ ಹರಿದುಬರುತ್ತಿದ್ದು, ಇದರಲ್ಲಿ ಬಹುತೇಕ ಕಪ್ಪುಹಣ ಎಂಬ ಶಂಕೆ ವ್ಯಕ್ತವಾಗಿದೆ. ಹಾಗಾಗಿ ವಿತ್ ಡ್ರಾ ಮಿತಿಯನ್ನು ಕಡಿತಗೊಳಿಸಿದೆ. ತಿಂಗಳಿಗೆ ಗರಿಷ್ಠ 10 ಸಾವಿರ ರೂ. ನಗದು ಹಣವನ್ನು ಮಾತ್ರ ಹಿಂಪಡೆಯಬಹುದು ಎಂದು ಆರ್‍ಬಿಐ ಸೂಚಿಸಿದೆ.

ಜನಧನ್ ಖಾತೆಯನ್ನು ಹೊಂದಿರುವ ರೈತರು, ಬಡವರು ಕಪ್ಪುಹಣದ ಕಾಲದಲ್ಲಿ ಬೀಳದಿರಲಿ ಎಂದು ಆರ್ಬಿಐ ಈ ಯೋಜನೆ ಜಾರಿಗೆ ತಂದಿದೆ ಎನ್ನಲಾಗಿದೆ.

ಡಿ.30 ಡೆಡ್‍ಲೈನ್: 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು, ಹಳೆಯ ನೋಟುಗಳನ್ನು ಬ್ಯಾಂಕ್‍ಗಳಲ್ಲಿ ಜಮಾಗೊಳಿಸಲು ಡಿ.30 ಕೊನೆಯ ದಿನವಾಗಿದೆ. ಈ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಸ್ಪಷ್ಟಪಡಿಸಿದೆ.

Leave a Reply

comments

Related Articles

error: