ಪ್ರಮುಖ ಸುದ್ದಿ

ಚೆನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಿಯಾಗಿ ಬಂದರೂ ಗೆಲ್ಲೋದು ಕುಮಾರಸ್ವಾಮಿಯೇ : ಹೆಚ್.ಡಿ.ದೇವೇಗೌಡ ವಿಶ್ವಾಸ

ರಾಜ್ಯ(ರಾಮನಗರ)ಏ.13:- ಚೆನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಿಯಾಗಿ ಬಂದರೂ ಗೆಲ್ಲೋದು ನಮ್ಮ ಕುಮಾರಸ್ವಾಮಿಯೇ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ.ರೇವಣ್ಣ ಸ್ಪರ್ಧಿಸುತ್ತಾರಂತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರೇವಣ್ಣನವರ ಸ್ಪರ್ಧೆಯಲ್ಲಿ ಯಾವುದೇ ಅಚ್ಚರಿಯಿಲ್ಲ. ನಾನು ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಾಗ ಕಾಂಗ್ರೆಸ್ ನಿಂದ ಡಿ.ಕೆ.ಶಿವಕುಮಾರ್, ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪನವರನ್ನು ನಿಲ್ಲಿಸಿದ್ದರು. ಆದರೆ ನಾನೇ ಗೆದ್ದಿರಲಿಲ್ಲವೇ ಎಂದು ನಗು ನಗುತ್ತಲೇ ಉತ್ತರಿಸಿದರು. ಅಲ್ಲಿನ ಜನ ಅನಿತಾಕುಮಾರಸ್ವಾಮಿ ಅವರನ್ನು ನಿಲ್ಲಲು ಒತ್ತಾಯಿಸಿದ್ದರು. ಆದರೆ ಕುಮಾರಸ್ವಾಮಿ ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಸುವುದು ಎಂದಿದ್ದರಿಂದ ಎರಡೂ ಕಡೆ ಕುಮಾರಸ್ವಾಮಿಯವರೇ ಸ್ಪರ್ಧಿಸುವಂತಾಯಿತು. ನಾವು ಯಾರಿಗೂ ದ್ರೋಹ ಮಾಡಿಲ್ಲ. ನನಗೆ ವಿಶ್ವಾಸವಿದೆ. ಚನ್ನಪಟ್ಟಣದ ಜನ ನಮ್ಮನ್ನು ಹರಸಿ ಹಾರೈಸುತ್ತಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: