ಮೈಸೂರು

ವಯೋಸಹಜ, ಅನಾರೋಗ್ಯದಿಂದ ಮೃಗಾಲಯದ ಪ್ರಾಣಿಗಳು ಸಾವು: ಕಮಲಾ ಕರಿಕಾಳನ್ ಸ್ಪಷ್ಟನೆ

ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ಸರಣಿ ಸಾವಿಗೆ ಅನಾರೋಗ್ಯ ಹಾಗೂ ವಯೋಸಹಜವೆಂದು ಮೃಗಾಲಯ ಕಾರ್ಯನಿರ್ವಾಹಕ ಅಧಿಕಾರಿ ಕಮಲಾ ಕರಿಕಾಳನ್ ತಿಳಿಸಿದ್ದಾರೆ.

ಇತ್ತೀಚೆಗೆ ಗರ್ಭಿಣಿ ಜೀಬ್ರಾ, ಕಾಳಿಂಗ ಸರ್ಪ, ಆನಕೊಂಡ, ಕಾಡೆಮ್ಮೆ, ಸೇರಿದಂತೆ ಹಲವಾರು ಪ್ರಾಣಿಗಳು ಮೃತಪಟ್ಟಿದ್ದು ಇದಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಗಳ ಶೀತಲ ಸಮರವೇ ಕಾರಣವೆನ್ನುವ ಅನುಮಾನಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಾಣಿಗಳ ಸಾವಿಗೆ ನಿಖರವಾದ ಮಾಹಿತಿ ಮೃಗಾಲಯದಲ್ಲಿವೆ. ಹೊಟ್ಟೆ ನೋವಿನಿಂದ ಬಳಲಿ ‘ರಿದಿ’ ಜೀಬ್ರಾ ಮೃತಪಟ್ಟಿದೆ. ಕಾಳಿಂಗ ಸರ್ಪ ವಯೋಸಹಜವಾಗಿ ಸಾವಿಗೀಡಾಗಿದೆ. ಅದರಂತೆ ಗರ್ಭಿಣಿ ಕಾಡೆಮ್ಮೆ ಹೊಟ್ಟೆಯಲ್ಲಿಯೇ ಕರು ಮೃತಪಟ್ಟಿತ್ತು, ಕರುವನ್ನು ಹೊರತೆಗೆದು ಕಾಡೆಮ್ಮೆಯನ್ನು ಉಳಿಸಲು ವೈದ್ಯರು ಹರಸಾಹಸಪಟ್ಟರು ಸಾಧ್ಯವಾಗಿಲ್ಲ.

ಮೃಗಾಲಯದ ಸಿಬ್ಬಂದಿ ಪ್ರಾಣಿಗಳನ್ನು ಅತ್ಯಂತ ಕಾಳಜಿಯಿಂದ ಸುಶ್ರೂಷೆ ಮಾಡುತ್ತಿದ್ದು ತಮ್ಮ ಮಕ್ಕಳಂತೆ ಪೋಷಿಸುತ್ತಿದ್ದಾರೆ. ಅವುಗಳಿಗೆ ಯಾವ ಹಾನಿಯನ್ನುಂಟು ಮಾಡಿಲ್ಲ. ಜೀವಹಾನಿಗೆ ಸಿಬ್ಬಂದಿಯೇನಾದರು ಹೊಣೆಯಾದರೆ ಮುಲಾಜಿಲ್ಲದೆ ವನ್ಯಜೀವಿ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು. ವೈದ್ಯಕೀಯ ವರದಿ ಲಭ್ಯವಾಗಬೇಕಿದೆ. ಮರಣೋತ್ತರ ಪರೀಕ್ಷೆಯ ವರದಿ ನಂತರ ಪ್ರತಿಕ್ರಿಯಿಸಲಾಗುವುದು ಎಂದು ತಿಳಿಸಿದರು.

Leave a Reply

comments

Related Articles

error: