ಮೈಸೂರು

ಚಾಮುಂಡೇಶ್ವರಿ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಸಿ ಎಂ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ

ಮೈಸೂರು,ಏ.13:- ಮೈಸೂರಿನಲ್ಲಿ ಹಾಲಿ ಮತ್ತು ಮಾಜಿ ಸಿಎಂಗಳ ಜುಗಲ್ ಬಂದಿ ನಡೆದಿದೆ.

ಹೈ ವೋಲ್ಟೇಜ್ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಚಾಮುಂಡೇಶ್ಚರಿ ಪಟ್ಟಕ್ಕೆ ಹಾಲಿ ಮತ್ತು ಮಾಜಿ ಸಿಎಂಗಳು ಮೈಸೂರು ಫೆರೇಡ್ ನಡೆಸಿದ್ದಾರೆ. 16ರಿಂದ 2 ದಿನಗಳ ಕಾಲ  ಮೈಸೂರಿನಲ್ಲಿ ಸಿಎಂ  ಸಿದ್ದರಾಮಯ್ಯ ಠಿಕಾಣಿ ಹೂಡಲಿದ್ದು, ಸಿಎಂ ಬರೋ ಮುನ್ನವೇ 14 ರಿಂದ ಮೂರುದಿನಗಳ ಕಾಲ ಮಾಜಿ ಸಿಎಂ ಕುಮಾರಸ್ವಾಮಿ ಚಾಮುಂಡೇಶ್ವರಿಯಲ್ಲಿ ಠಿಕಾಣಿ ಹೂಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರದ 32 ಹಳ್ಳಿಗಳಲ್ಲಿ ಭರ್ಜರಿ ರೌಂಡ್ಸ್ ನಡೆಸಲಿದ್ದು, ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಲಿಂಗಾಬುದಿಪಾಳ್ಯ, ಶ್ರೀರಾಂಪುರ,ಪರಸಯ್ಯನಹುಂಡಿ,ರಮಾಬಾಯಿ ನಗರ ಸೇರಿದಂತೆ ಮೊದಲ ದಿನ 16 ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ 18 ಕ್ಕೆ ಜಟ್ಟಿಹುಂಡಿ,ಗೋಹಳ್ಳಿ,ಕೊಮಾರಬೀಡು, ಬೀರಿಹುಂಡಿ, ಸೇರಿ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರಂತೆ. ಸಿಎಂ ಕ್ಷೇತ್ರಕ್ಕೆ ಬರುವ ಮುನ್ನವೇ ಮಾಜಿ ಸಿಎಂ ಕುಮಾರಸ್ವಾಮಿ ಎಂಟ್ರಿ ಕೊಡಲಿದ್ದು, ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಇದೇ ಮೊದಲಬಾರಿಗೆ ಕುಮಾರಸ್ವಾಮಿ ರೌಂಡ್ಸ್ ಹಾಕಲಿದ್ದಾರೆ. ನಾಳೆ ಮೈಸೂರಿಗೆ ಕುಮಾರಸ್ವಾಮಿ ಆಗಮಿಸಲಿದ್ದು, ಮೊದಲ ದಿನ ಹಿನಕಲ್,ಕೋಟೆಹುಂಡಿ,ಡಿ.ಸಾಲುಂಡಿ, ದಾರಿಪುರ ಸೇರಿ 27 ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ.15 ಕ್ಕೆ ಲಿಂಗಾಬುದಿ ಪಾಳ್ಯ, ತಳೂರು,ಬೋಗಾದಿ,ಉದ್ಬೂರು ಸೇರಿ 33 ಗ್ರಾಮಗಳಲ್ಲಿ ರೌಂಡ್ಸ್ ಹಾಕಲಿದ್ದಾರೆ.16 ಕ್ಕೆ ರಟ್ಟನಹಳ್ಳಿ, ಇಲವಾಲ,ಹುಯಿಲಾಳು,ಕಮರಹಳ್ಳಿ,ಸಾಹುಕಾರಹುಂಡಿ ಸೇರಿ 38 ಹಳ್ಳಿಯಲ್ಲಿ ಕುಮಾರ ಸ್ವಾಮಿಯವರು ರೌಂಡ್ಸ್ ಹಾಕಲಿದ್ದಾರೆ. ಕಳೆದ ಬಾರಿ ಸಿಎಂ ಭೇಟಿ ನೀಡಿದ್ದ ಗ್ರಾಮಗಳಿಗೆ ಕುಮಾರಸ್ವಾಮಿ ತಪ್ಪದೇ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಚಾಮುಂಡೇಶ್ಚರಿ ಕ್ಷೇತ್ರದ ಅಧಿಪತ್ಯಕ್ಕೆ ಹಾಲಿ,ಮಾಜಿ ಸಿಎಂಗಳ ಕ್ಷೇತ್ರ ಸಂಚಾರ ನಡೆಯಲಿದೆ. ಚಾಮುಂಡೇಶ್ವರಿ ಕ್ಷೇತ್ರವನ್ನು ಸಿ ಎಂ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: