ಮೈಸೂರು

ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ಹಣ ಎಣಿಕೆ

ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಹಣವನ್ನು ಎಣಿಸಲಾಯಿತು.

ಬುಧವಾರ ಶ್ರೀಕಂಠೇಶ್ವರ ಸ್ವಾಮಿಗಳ ಹುಂಡಿಯ ಹಣದ ಎಣಿಕೆ ಕಾರ್ಯವನ್ನು ಇ.ಒ.ಜಯಪ್ರಕಾಶ್ ನೇತೃತ್ವದಲ್ಲಿ ನಡೆಸಲಾಯಿತು. ಹುಂಡಿಯಲ್ಲಿ 95, 43,900ನಗದು, 62ಗ್ರಾಂ ಚಿನ್ನ, 2.5ಕೆ.ಜಿ.ಬೆಳ್ಳಿ, 5ಡಾಲರ್ ಸಂಗ್ರಹವಾಗಿದೆ. 500-1000ರೂ.ಮುಖಬೆಲೆಯ ನೋಟುಗಳ ಅಮಾನ್ಯದಿಂದ 500-1000ನೋಟುಗಳು ಹೆಚ್ಚು ಬರುವಿಕೆಯ ನಿರೀಕ್ಷೆ ಇತ್ತು. ಆದರೆ ಮಾಮೂಲಿನಂತೆಯೇ ಇದ್ದು ಯಾವ ಹೆಚ್ಚಿನ ಬದಲಾವಣೆಗಳೂ ಕಂಡು ಬಂದಿಲ್ಲ. 500ರೂ.ಮುಖಬೆಲೆಯ 18ಲಕ್ಷದ 55ಸಾವಿರ ಹಾಗೂ 1000 ಮುಖಬೆಲೆಯ 7ಲಕ್ಷರೂ. ಹಳೆಯ ನೋಟುಗಳು ಬಂದಿವೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಜೈಪ್ರಕಾಶ್ ತಿಳಿಸಿದರು.

ಕಾವೇರಿ ಗ್ರಾಮೀಣ ಬ್ಯಾಂಕ್ ನ ಸಹಭಾಗಿತ್ವದಲ್ಲಿ 125ಜನ ಮಹಿಳಾ ಸ್ವಸಹಾಯ ಸಂಘದವರು ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

Leave a Reply

comments

Related Articles

error: