
ಕರ್ನಾಟಕ
ಬಲೂನ್ ಗ್ಯಾಸ್ ಸ್ಫೋಟ: ಕಾಲು ಕಳೆದುಕೊಂಡ ಯುವಕ
ಶಿವಮೊಗ್ಗ,ಏ.13: ಬಲೂನ್ ಗ್ಯಾಸ್ ಸ್ಫೋಟಗೊಂಡು ಯುವಕನ ಕಾಲು ಛಿದ್ರವಾಗಿರುವ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರು ನಗರದ ಚರ್ಚ್ನಲ್ಲಿ ನಡೆದಿದೆ.
ಇಕ್ಬಾಲ್ ಕಾಲು ಕಳೆದುಕೊಂಡ ಯುವಕ. ಮದುವೆ ಸಂಭ್ರಮಕ್ಕಾಗಿ ಬಲೂನ್ ಡೆಕೋರೇಷನ್ ಮಾಡುವಾಗ ಬಲೂನ್ ಗ್ಯಾಸ್ ಸ್ಫೋಟಗೊಂಡು ಯುವಕನ ಕಾಲು ಛಿದ್ರವಾಗಿದೆ. ಬಲೂನ್ ಗೆ ತುಂಬಿಸಲು ತಂದಿದ್ದ ಗ್ಯಾಸ್ ನೈಟ್ರೋಜನ್ ಸಿಲಿಂಡರ್ ಹೀಟ್ ಆಗಿ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದ ಕಾಲು ಕಳೆದುಕೊಂಡ ಇಕ್ಬಾಲ್ ನನ್ನು ಆಸ್ಪತ್ರೆ ದಾಖಲಿಸಲಾಗಿದೆ. (ವರದಿ: ಪಿ.ಎಸ್ )