ಮೈಸೂರು

ವಿಶ್ವ ಏಡ್ಸ್ ದಿನಾಚರಣೆ : ಕಾಲ್ನಡಿಗೆಯಲ್ಲಿ ಚಾಮುಂಡಿ ಬೆಟ್ಟ ಏರಿದ ಎಚ್‍.ಐ.ವಿ. ಸೋಂಕಿತ ಮಕ್ಕಳು

ವಿಶ್ವ ಏಡ್ಸ್ ದಿನಾಚರಣೆಯ  ಅಂಗವಾಗಿ  ಗುರುವಾರ ಮೈಸೂರಿನ ಅಮ್ಮ ಮನೆಯ ಹೆಚ್.ಐ.ವಿ ಪೀಡಿತ ಮಕ್ಕಳು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಾದದ ಬಳಿಯಿಂದ ಸಾರ್ವಜನಿಕರೊಂದಿಗೆ ಮೆಟ್ಟಿಲುಗಳನ್ನು ಹತ್ತಿದರು.

ಗುರುವಾರ ಬೆಳಿಗ್ಗೆ 7 ಗಂಟೆಗೆ ಮಾಜಿ ಸಚಿವ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ಮಕ್ಕಳು ಸಾರ್ವಜನಿಕರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟವನ್ನು ಏರಿದರು. ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಬೆಟ್ಟವನ್ನು ಏರಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಗೆ ಒಳಿತಾಗಲೆಂದು ಚಾಮುಂಡಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅಲ್ಲಿಂದ ಹಿಂದಿರುಗಿದ ಬಳಿಕ ಕೆ.ಆರ್. ಆಸ್ಪತ್ರೆಯ ಎ.ಆರ್.ಟಿ. ಸೆಂಟರ್ ನಲ್ಲಿರುವ ಹೆಚ್.ಐ.ವಿ. ಪೀಡಿತರಿಗೆ ಸಿಹಿ ಹಂಚಲಾಯಿತು. ಆಶಾಕಿರಣ ಆಸ್ಪತ್ರೆಯಲ್ಲಿರುವ ಹೆಚ್.ಐ.ವಿ. ಪೀಡಿತರಿಗೆ ಸಿಹಿ ವಿತರಿಸಿದರು.

 

Leave a Reply

comments

Related Articles

error: