
ದೇಶ
ಅಪರಾಧ ಮತ್ತು ಅಪರಾಧಿಗಳೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲ್ಲ : ಯೋಗಿ ಆದಿತ್ಯನಾಥ್
ದೇಶ(ನವದೆಹಲಿ)ಏ.13:- ಉನ್ನಾವೋ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಪ್ರಾರಂಭಿಸಿದ್ದು, ಶಾಸಕ ಕುಲ್ದೀಪ್ ಸಿಂಗ್ ಅವರನ್ನು ವಿಚಾರಣೆ ನಡೆಸುತ್ತಿದೆ. ಪ್ರಕರಣ ಕುರಿತಂತೆ ಮೌನ ಮುರಿದಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪರಾಧ ಮತ್ತು ಅಪರಾಧಿಗಳೊಂದಿಗೆ ಸರ್ಕಾರ ಮತ್ತು ಆಡಳಿತ ಯಾವುದೇ ರೀತಿಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಅಪರಾಧಿ ಎಷ್ಟೇ ದೊಡ್ಡವರಾದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ತನಿಖೆಗಾಗಿ ಎಸ್ ಐಟಿಯನ್ನು ರಚಿಸಿದೆ. ಅಪರಾಧಿಗಳು ಯಾವುದೇ ಸ್ಥಿತಿಯಲ್ಲಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆರೋಪಿ ಶಾಸಕನಿಂದ ಸಿಬಿಐ ತಂಡ ಮಾಹಿತಿ ಕಲೆ ಹಾಕಲು ಯತ್ನಿಸುತ್ತಿದ್ದು, ವಿಚಾರಣೆ ಪೂರ್ಣಗೊಂಡ ಬಳಿಕ ತಂಡ ನ್ಯಾಯಾಲಯದಲ್ಲಿ ಶಾಸಕನನ್ನು ಹಾಜರುಪಡಿಸಲಿದೆ. (ಎಸ್.ಎಚ್)