
ಮೈಸೂರು
ಐವರು ಶಂಕಿತ ಉಗ್ರರಿಗೆ ಡಿ.9 ರ ವರೆಗೆ ನ್ಯಾಯಾಂಗ ಬಂಧನ
ಮೈಸೂರು ಕೋರ್ಟ್ ಆವರಣದಲ್ಲಿನ ಶೌಚಾಲಯದಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ಹಾಗೂ ಎನ್ಐಎ ಪೊಲೀಸ್ ತಂಡದಿಂದ ಬಂಧಿತರಾಗಿರುವ ಶಂಕಿತ ಅಲ್ಖೈದಾ ಸಂಘಟನೆಯ ಐದು ಮಂದಿ ಉಗ್ರರನ್ನು ಡಿ.9ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಶಂಕಿತರನ್ನು ವಶಕ್ಕೆ ಪಡೆದಿರುವ ಎನ್ಐಎ, ಆರೋಪಿಗಳಿಗೆ ಚೆನ್ನೈ, ಮಧುರೈನಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಸುಲೇಮಾನ್ ದಾವೂದ್, ಅಬ್ಬಾಸ್ ಅಲಿ, ಶಂಶೀಲ್ ಕರ್ವಾ, ಆಯೂಬ್ ಹಾಗೂ ಸಮೂನ್ಸ್ ಕರೀಂ ಅವರನ್ನು ಬೆಂಗಳೂರು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಡಿ. 9ರ ವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.