ಮೈಸೂರು

‘ಗುರು’ ಎಂಬ ಎರಡಕ್ಷರ ಬೆಲೆ ಕಟ್ಟಲಾಗದ್ದು : ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ರಶ್ಮಿ.ಜೆ.ಕೆ.

ಮೈಸೂರು,ಏ.13:- ‘ಗುರು’ ಎಂಬ ಎರಡಕ್ಷರ ಬೆಲೆ ಕಟ್ಟಲಾಗದ್ದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ರಶ್ಮಿ.ಜೆ.ಕೆ.ತಿಳಿಸಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜು, ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರ ಸಾಂಸ್ಕೃತಿಕ ವೇದಿಕೆ, ಅಭಿವ್ಯಕ್ತಿ ವೇದಿಕೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರೇಂಜರ್ ಘಟಕಗಳು ಅವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿಂದು ನಡೆದ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ನಿಮ್ಮ ಜೀವನದಲ್ಲಿ ನಿಜವಾದ ಹೀರೋಗಳು ಯಾರೆಂದರೆ ನಾವು ಚಿತ್ರ ನಟರ ಹೆಸರುಗಳನ್ನು ಹೇಳುತ್ತೇವೆ. ಅದರೆ ನಮ್ಮ ಜೀವನದಲ್ಲಿ ನಿಜವಾದ ಹೀರೋಗಳು ನಮ್ಮ ಅಮ್ಮ-ಅಪ್ಪ-ಗುರು ಆಗಿದ್ದಾರೆ. ನಮ್ಮ ಬದುಕಿನಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುವ ಅವರೇ ನಿಜವಾದ ಹೀರೋಗಳು. ನಾನು ಕಳೆದ20ವರ್ಷದ ಹಿಂದೆ ಇಂತಹುದೇ ಕಾರ್ಯಕ್ರಮದಲ್ಲಿ ಇದೇ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿ ಅಧ್ಯಕ್ಷೆಯಾಗಿದ್ದೆ. ನನ್ನನ್ನು ಅಧ್ಯಾಪಕರುಗಳು ಬಹಳ ಎತ್ತರಕ್ಕೆ ಕರೆದೊಯ್ದಿದ್ದಾರೆ. ತಾಯಿಯ ಋಣ, ಗುರುವಿನ ಋಣ ತೀರಿಸಲಾಗದು ಎಂದರು. ನನಗೆ ಟೀಚರ್ ಆಗಬೇಕೆಂದು ಆಸೆಯಿತ್ತು. ಆದರೆ ನಮ್ಮ ತಂದೆಗೆ ನಾನು ಟೀಚರ್ ಆಗುವುದು ಇಷ್ಟವಿರಲಿಲ್ಲ. ಮೊದಲು ಚೆನ್ನಾಗಿ ಓದುತ್ತಿರಲಿಲ್ಲ. ನಂತರದ ದಿನಗಳಲ್ಲಿ ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆದೆ. ವಾರ್ಷಿಕ ಸಂಚಿಕೆಯ ಸಂಪಾದಕಿಯಾದೆ. ಅಂದಿನಿಂದ ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕಿತು. ಈ ಅಭಿವ್ಯಕ್ತಿ ಕಾಲಂ ಅನ್ನೋದು ನನ್ನ ವೇಳೆಯೇ ಆರಂಭವಾಗಿದ್ದು. ಬಳಿಕ ಕನ್ನಡ ಎಂ.ಎ.ಗೆ ಸೇರಿದೆ. 6ಚಿನ್ನದ ಪದಕ, 2ನಗದು ಬಹುಮಾನ ಪಡೆದೆ. ಬಳಿಕ ನನ್ನ ತಾಯಿಯ ಆಸೆಯಂತೆ ಕೆಎಎಸ್ ನ್ನು ಮೊದಲ ಪ್ರಯತ್ನದಲ್ಲಿಯೇ ಬರೆದು ಉತ್ತೀರ್ಣಳಾದೆ ಎಂದು ತಾನು ಬೆಳೆದ ಬಂದು ಹಾದಿಯನ್ನು ವಿವರಿಸಿದರಲ್ಲದೇ, ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿನಿಯರು ಯಾವ ರೀತಿ ತೊಡಗಿಸಿಕೊಳ್ಳಬೇಕೆನ್ನುವ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಸಿದ್ಧ ರಂಗಭೂಮಿ ಕಲಾವಿದೆ,ಹಿರಿತೆರೆ ನಟಿ ಸುಧಾ ಬೆಳವಾಡಿ, ಪ್ರಾಂಶುಪಾಲ ಡಾ.ಎಂ.ಚನ್ನಬಸವೇಗೌಡ, ಸಾಂಸ್ಕೃತಿಕ ವೇದಿಕೆಯ ಅಧ್ಯಾಪಕ ಕಾರ್ಯದರ್ಶಿ ಪ್ರೊ.ನಂಜುಂಡಯ್ಯ, ಅಭಿವ್ಯಕ್ತ ವೇದಿಕೆಯ ಸಂಚಾಲಕ ಡಾ.ರಾಘವೇಂದ್ರ ಎಸ್.ಜಿ, ಪ್ರೊ.ಶೈಲಜಾ ಬಿ.ಎಸ್, ಭಾರತ ಸ್ಕೌಟ್ &ಗೈಡ್ಸ್ ನ ರೇಂಜರ್ ಘಟಕದ ಸಂಚಾಲಕಿ ಪ್ರೊ.ಸುಮ, ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿ ಅಧ್ಯಕ್ಷ ಲಾವಣ್ಯ, ವಿದ್ಯಾರ್ಥಿ ಕಾರ್ಯದರ್ಶಿ ಆಯಿಷಾ ಬಾನು ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: