
ಮೈಸೂರು
ನೋಟು ಬಿಸಿ ಹಿನ್ನೆಲೆ, ನಗರದೆಡೆಗೆ ಮುಖಮಾಡಿದ ನಕ್ಸಲರು: ಗಡಿಗಳಲ್ಲಿ ಕಟ್ಟೆಚ್ಚರ
ಕೇಂದ್ರ ಸರ್ಕಾರವೂ ನೋಟು ಅಮಾನ್ಯಗೊಳಿಸಿದ ಬಿಸಿ ನಕ್ಸಲರಿಗೂ ತಟ್ಟಿದ್ದು, ನಾಡಿನೊಳಗೆ ಪ್ರವೇಶಿಸಲು ಸಿದ್ಧತೆ ನಡೆಸಿರುವ ಸುಳಿವು ರಾಜ್ಯ ಪೊಲೀಸರಿಗೆ ದೊರೆತಿದ್ದು ಇದರಿಂದ ರಾಜ್ಯದ ಗಡಿಭಾಗಗಳಲ್ಲಿ ನಿಗಾ ವಹಿಸಲಾಗಿದೆ.
ಹಣಕಾಸಿನ ಮುಗ್ಗಟ್ಟಿನ ಬಿಸಿ ನಕ್ಸಲರಿಗೂ ತಟ್ಟಿದ್ದು ಬವಣೆ ನೀಗಿಸಿಕೊಳ್ಳಲು ನಾಡಿನೆಡೆಗೆ ಮುಖಮಾಡಿದ್ದಾರೆ ಎನ್ನುವ ಸುಳಿವಿನ ಶಂಕೆ ಈಗಾಗಲೇ ಪೊಲೀಸರಿಗೆ ದೊರೆತಿದೆ. ಕೇರಳದ ಗಡಿಗಂಟಿಕೊಂಡಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ರಾಜ್ಯಕ್ಕೆ ನುಸುಳಲಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೂರು ರಾಜ್ಯಗಳಿಗೆ ಸಂಪರ್ಕ ಸೇತುವಾದ ಗುಂಡ್ಲುಪೇಟೆ ಮೂಲಕ ಚಾಮರಾಜನಗರ ಜಿಲ್ಲೆಯೊಳಗೆ ನಕ್ಸಲರು ನುಸುಳುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಗಡಿಭಾಗದ ಎಲ್ಲಾ ಚೆಕ್ಪೋಸ್ಟ್ ಗಳಲ್ಲಿಯೂ ತೀವ್ರ ನಿಗಾ ವಹಿಸಾಗಿದೆ.