ಮೈಸೂರು

ಎಸ್.ಎಸ್.ಎಲ್.ಸಿ ನಂತರದ ವೃತ್ತಿ ಜೀವನ : ಇಂದು ಉಚಿತ ಕಾರ್ಯಾಗಾರ

ಮೈಸೂರು, ಏ.13 : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗಾಗಿ ವೃತ್ತಿ ಜೀವನ ಕುರಿತು ಏ.15ರಂದು ವಿಜಯನಗರದ ಲರ್ನರ್ ಪಿಯು ಕಾಲೇಜಿನಿಂದ ಉಚಿತ ಮಾರ್ಗದರ್ಶನ ಕಾರ್ಯಾಗಾರ, ವಿಚಾರಗೋಷ್ಠಿಯನ್ನು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದಲ್ಲಿ ಗುಜರಾತಿನ ಮೋಹಿತ್ ಮಂಗಲ್ ಅವರು ಮಾತನಾಡಲಿದ್ದಾರೆ. ಇವರು ವಿದ್ಯಾರ್ಥಿಗಳ ಪ್ರೇರಣೆದಾಯಕರಾಗಿದ್ದು, ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ಕಾಲೇಜಿನ ಸಂಸ್ಥಾಪಕ ಮುರಳಿ ಮೋಹನ್ ಶುಕ್ರವಾರ ಸುದ್ದಿಗೋಷ್ಠಿಲ್ಲಿ ತಿಳಿಸಿದರು.

ವಿದ್ಯಾರ್ಥಿಗಳು ಸಾಮಾನ್ಯವಾಗಿ 10ನೇ ತರಗತಿಯ ತುಲನೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುತ್ತಾರೆ. ಈ ಪದ್ಧತಿಯನ್ನು ಹತ್ತಿಕ್ಕಲು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಈ ಮಾರ್ಗದರ್ಶನ ನೀಡಲಾಗುತ್ತಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಎನ್‌ಸಿಇಆರ್‌ಟಿ ಸಿದ್ಧಪಡಿಸಿರುವ ವೃತ್ತಿ ಜೀವನದ ಕೈಪಿಡಿಯನ್ನು ವಿತವರಿಸಲಾಗುವುದು ಎಂದರು.

ವಿದ್ಯಾರ್ಥಿಗಳಲ್ಲದೇ ಅವರ ಪೋಷಕರುಮ ಶಿಕ್ಷಕರು  ಏ.14ರ ಒಳಗೆ ತಮ್ಮ ಹೆಸರನ್ನು ದೂರವಾಣಿ  9916933202 ಅನ್ನು ಸಂಪರ್ಕಿಸುವಂತೆ ತಿಳಿಸಿದರು.

ಕಾಲೇಜಿನ ಕೆ.ಎಲ್.ಬಸವರಾಜು, ಪುರುಷೋತ್ತಮ, ಶಿವಕುಮಾರ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: