ಸುದ್ದಿ ಸಂಕ್ಷಿಪ್ತ

ನಾಳೆ ‘ಮರ್ಯಾದಾ ಸಹಧರ್ಮಿಣಿ ಪ್ರಶಸ್ತಿ ಪ್ರದಾನ’

ಮೈಸೂರು, ಏ.13:- ಮೈಸೂರಿನ ಪ್ರತಿಷ್ಠಿತ ವೆಂಕಟಗಿರಿ ಪ್ರಕಾಶನದ ಸಂಸ್ಥಾಪಕರು ಹಾಗೂ ಸಮಾಜ ಸೇವಕರಾದ ಶಾಂತ ಗಿರಿಗೌಡರವರಿಗೆ 65ನೇ ಜನ್ಮದಿನದ ಸಂಭ್ರಮದಲ್ಲಿ (ನಾಳೆ) ಏ.14ರ ಸಂಜೆ 4.30ಕ್ಕೆ ನಗರದ ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಕಾನೂನು ಕಾಲೇಜಿನ ಎಂ.ವೆಂಕಟಕೃಷ್ಣಯ್ಯ ಸಭಾಂಗಣದಲ್ಲಿ ‘ಮರ್ಯಾದಾ ಸಹಧರ್ಮಿಣಿ ಪ್ರಶಸ್ತಿ ಪ್ರದಾನ’ ಸಮಾರಂಭವನ್ನು ನೀ.ಗಿರಿಗೌಡ ವಿದ್ಯಾರ್ಥಿ ಮತ್ತು ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿದೆ.

ಈ ಪ್ರಶಸ್ತಿ ಪ್ರದಾನವನ್ನು ಮಹಾಕವಿಯತ್ರಿ ಡಾ.ಲತಾ ರಾಜಶೇಖರ್‍ರವರು ನೆರವೇರಿಸಲಿದ್ದು, ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಪೀಠಾದಿಪತಿಗಳಾದ ಡಾ.ಭಾಷ್ಯಂ ಸ್ವಾಮೀಜಿಯವರು ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಬಿ.ಎಸ್.ಪಾರ್ಥಸಾರಥಿ, ವಿಶ್ರಾಂತ ಪ್ರಾಂಶುಪಾಲರಾದ ಎಸ್.ನಾಗರಾಜು, ಉದ್ಯಮಿ ಎಲ್.ಡಿ.ರವಿ, ಕಾಡೇನಹಳ್ಳಿ ವೀರಣ್ಣಗೌಡ, ಜಾಂಬವತಿ ಶ್ರೀಧರ್ ಭಾಗವಹಿಸಲಿದ್ದಾರೆ. ಅಭಿನಂದನಾ ನುಡಿಗಳನ್ನು ಭೂ ದಾಖಲೆಗಳ ಜಂಟಿ ನಿರ್ದೇಶಕರಾದ ಎಂ.ಎಸ್.ಮರಿಸ್ವಾಮಿಗೌಡ, ಕನ್ನಡ ಪ್ರಾಧ್ಯಾಪಕ ಡಾ.ಎಚ್.ಆರ್.ತಿಮ್ಮೇಗೌಡ, ಲೇಖಕರಾದ ಡಾ.ಎ.ಪುಷ್ಪಅಯ್ಯಂಗಾರ್, ನಾಗರತ್ನ ಹೆಮ್ಮಿಗೆ, ಡಾ.ಹೆಚ್.ಪಿ.ಗೀತಾ, ಪ್ರೊ.ಕೌಸಲ್ಯಾದೇವಿ, ಡಾ.ಕೆ.ಲೀಲಾಪ್ರಕಾಶ್, ರೈತನಾಯಕ ಎ.ಎಲ್.ಕೆಂಪೂಗೌಡ ಮಾತನಾಡಲಿದ್ದಾರೆ.

ಸಮಾರಂಭದ ನಂತರ ರಂಗಗೀತೆಗಳನ್ನು ಹಿರಿಯ ರಂಗ ಕಲಾವಿದರಾದ ಕುಪ್ಯ ವೆಂಕಟರಾಮು, ಅನನ್ಯ, ಶಶಿಕಲಾ ಚಂದ್ರಶೇಖರ್, ಸುನಂದಾ ದಿಲೀಪ್, ಗಾಯಕಿ ಶಾಂತಾ ಜಗದೀಶ್ ಅವರಿಂದ ಗೀತ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

Check Also

Close
error: