ಮೈಸೂರು

ನಿಧಿ ಸಂಗ್ರಹ : ‘ರೈಡ್ ಫಾರ್ ರೋಟರಿ’ ಏ.14 ರಂದು ಚಾಲನೆ

ಮೈಸೂರು,ಏ.13 : ಅಂತರರಾಷ್ಟ್ರೀಯ ಸಂಸ್ಥೆ ರೋಟರಿ ವತಿಯಿಂದ ನಿಧಿ ಸಂಗ್ರಹಕ್ಕಾಗಿ ಆಯೋಜಿಸಿರುವ ‘ರೈಡ್ ಫಾರ್ ರೋಟರಿ’ ಕಾರ್ಯಕ್ರಮವನ್ನು ಮೈಸೂರು ರೆಸ್ ಕ್ಲಬ್ ಬಳಿ ಏ.14ರ ಸಂಜೆ 6ಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ಚಾಲನೆ ನೀಡುವರು.

ರಾಜ್ಯದ ನಾಲ್ಕು ಜಿಲ್ಲಾ ರೋಟರಿ ಸಂಸ್ಥೆಗಳು ಸಂಯುಕ್ತವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ರೋಟರಿ ಡಿಸ್ಟ್ರಿಕ್ಸ್ 3181 ಚಾಲನೆಗೊಳಿಸಲಿದೆ. ಅಂದು  ಸಂಜೆ ವಿಶೇಷ ಭೋಜನಕೂಟದಲ್ಲಿ ಸ್ಪರ್ಧಿಗಳ ಪರಿಚಯ, ಇದರೊಂದಿಗೆ ಚಿತ್ರನಟ ವಿಜಯರಾಘವೇಂದ್ರ, ಗಾಯಕ ರಾಜೇಶ್ ಕೃಷ್ಣನ್ ಅವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಘಟಕ ವೈ.ಎಸ್.ರಾಘವೇಂದ್ರ ತಿಳಿಸಿದರು.

ನಂತರ ಏ.15ರಂದು ಬೆಳಗ್ಗೆ 9ಕ್ಕೆ ಹೈವೇ ಸರ್ಕಲ್ ಬಳಿಯಿಂದ ಆರಂಭವಾಗುವ ರೈಡ್ ಗೆ ರೋಟರಿ ಜಿಲ್ಲಾ ಗವರ್ನರ್ ಸುರೇಶ್ ಚಂಗಪ್ಪ ಹಸಿರು ನಿಶಾನೆ ತೋರುವರು.ಸುಮಾರು 10 ದಿನಗಳ ಕಾಲಾ ನಡೆಯುವ ಈ ರ್ಯಾಲಿಯಲ್ಲಿ ಅಸ್ಟೇಲಿಯಾ, ಇಂಗ್ಲೆಡ್, ಇಟಲಿ, ಡೆನ್ಮಾರ್ಕ್ ದೇಶದ ಸಂಸ್ಥೆ ಸದಸ್ಯರು ಇಂಗ್ಲೇಡಿನ 73 ವರ್ಷದ ಗ್ರೇಹಂ ಬಿಲ್ಸ್ ಸೇರಿದಂತೆ ಒಟ್ಟು 20 ಜನ ರೈಡರ್ಸ್ ಪಾಲ್ಗೊಳ್ಳುವರು

ಹಾಸನ, ಹಳೆಬೀಡು, ಬೇಲೂರು, ಚಿಕ್ಕಮಗಳೂರು, ಶಿವಮೊಗ್ಗ, ಶಿರಸಿ, ಯಾನ, ಗೋವಾ, ಆಂಕೋಲಾ, ಕುಂದಾಪುರ, ಮಂಗಳೂರು, ಪುತ್ತೂರು, ಮಡಿಕೇರಿ ಮುಂತಾದೆಡೆ ಪ್ರೇಕ್ಷಣಿಯ ಸ್ಥಳ, ಕಡಲ ತೀರ, ಚರ್ಚ್, ಮುಂತಾದ ಸ್ಥಳಗಳಿಗೆ ಭೇಟಿ ನೀಡಲಿದ್ದು,.ಸುಮಾರು 2 ಸಾವಿರ ಕಿ.ಮೀ ಸಂಚರಿಸುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಅಧ್ಯಕ್ಷ ಅನಂತ್ ರಾಜ್ ಅರಸ್, ರವೀಂದ್ರ ಭಟ್, ರಾಘವೇಂದ್ರ, ವಿನೋದ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: