
ಮೈಸೂರು
ವಾಹನ ಸಂಚಾರ ನಿರ್ಬಂಧ
ಮೈಸೂರಿನ ಚಾಮರಾಜ್ ಒಡೆಯರ್ ವೃತ್ತದಿಂದ ಕೆ.ಆರ್.ವೃತ್ತದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರಿಂದ ಅಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಮೈಸೂರಿನ ಹಾರ್ಡಿಂಜ್ ವೃತ್ತದಿಂದ ಕೆ.ಆರ್.ವೃತ್ತದ ಕಡೆ ಬರುವ ವಾಹನಗಳು ನೀಲಗಿರಿ ರಸ್ತೆಯಲ್ಲಿ ಸಾಗಿ ಇರ್ವಿನ್ ರಸ್ತೆ, ಆಯುರ್ವೇದ ವೃತ್ತ ಮೂಲಕ ಕೆ.ಆರ್.ವೃತ್ತ ತಲುಪಬೇಕು. ಕೆ.ಆರ್.ವೃತ್ತದಿಂದ ಹಾರ್ಡಿಂಜ್ ವೃತ್ತದ ಕಡೆ ಸಾಗುವ ವಾಹನಗಳು ಸಯ್ಯಾಜಿರಾವ್ ರಸ್ತೆಯಲ್ಲಿ ಸಂಸ್ಕೃತ ಪಾಠಶಾಲೆಯ ಮೂಲಕ ಮುಂದೆ ಸಾಗಬೇಕಿದೆ.
ಅಶೋಕ ರಸ್ತೆಯಿಂದ ಕೋಟೆ ಆಂಜನೇಯಸ್ವಾಮಿ ದೇಗುಲದ ಕಡೆ ಬರುವ ವಾಹನಗಳಿಗೆ ದೊಡ್ಡ ಗಡಿಯಾರದ ಬಳಿ ನಿರ್ಬಂಧ ವಿಧಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಿದ ಪರಿಣಾಮ ನಗರದಲ್ಲಿ ವಾಹನ ದಟ್ಟಣೆ ಕಂಡು ಬಂತು. ಅನೇಕ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಯಿತು.