ಸುದ್ದಿ ಸಂಕ್ಷಿಪ್ತ
ಜ್ಞಾನಬುತ್ತಿ : ಏ.16ರಂದು ತರಬೇತಿ ಆರಂಭ
ಮೈಸೂರು,ಏ.13 : ಜ್ಞಾನಬುತ್ತಿ ಸಂಸ್ಥೆಯಿಂದ ಬ್ಯಾಂಕಿಂಗ್/ಆರ್ ಆರ್ ಬಿ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರ ಉದ್ಘಾಟನೆಯನ್ನು ಏ.16ರ ಸಂಜೆ 6ಕ್ಕೆ ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದೆ. ಮೈವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಮಮತ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ದಯಾನಂದ ಅವರುಗಳಿಂದ ‘ಜ್ಞಾನಭಂಡಾರ’ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸುವರು. ಅಂಕಣಕಾರ ಪ್ರೊ.ಎಂ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)