ಕರ್ನಾಟಕ

ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಟೆಂಪೋ ಪಲ್ಟಿ

ಕೋಲಾರ,ಏ.14: ಪಡಿತರ ಅಕ್ಕಿಯನ್ನು  ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಟೆಂಪೋ ಪಲ್ಟಿಯಾಗಿರುವ ಘಟನೆ ಜಿಲ್ಲೆ ಬಂಗಾರಪೇಟೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಅಕ್ರಮವಾಗಿ ಸುಮಾರು 75 ಮೂಟೆ ಪಡಿತರ ಅಕ್ಕಿಯನ್ನು ಚುನಾವಣಾ ಅಧಿಕಾರಿಗಳ ಕದ್ದು ಸಾಗಾಣೆ ಮಾಡುತ್ತಿದ್ದರು. ಈ ವೇಳೆ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ತಿಳಿದು ಟೆಂಪೋವನ್ನು ಚೇಸಿಂಗ್ ಮಾಡಿದ್ದಾರೆ. ನಂತರ ಬಂಗಾರಪೇಟೆ ಪಟ್ಟಣದ ಹೊರವಲಯದಲ್ಲಿ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಅಕ್ಕಿ ತುಂಬಿದ್ದ ಟೆಂಪೋ ಪಲ್ಟಿಯಾಗಿದೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು 75 ಅಕ್ಕಿ ಮೂಟೆ ಮತ್ತು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಬಳಿಕ ಟೆಂಪೋ ಚಾಲಕ ಪರಾರಿಯಾಗಿದ್ದಾನೆ. (ವರದಿ; ಪಿ.ಎಸ್ )

Leave a Reply

comments

Related Articles

error: